ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಮಾ. 12 : ಇತ್ತಿಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ವಿಜೇತರಾದ ಪದಾಧಿಕಾರಿಗಳ ಪದಗ್ರಹಣದ ಯುವ ಸಂಕಲ್ಪ ಸಮಾರಂಭವು ಮಾ. 17ರ ಸೋಮವಾರ ಬೆಂಗಳೂರಿನ ಅರಮನೆ ಮೈದಾನದ 4ನೇ ಗೇಟ್ ಬಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರು ಮಂಜುನಾಥ ಶೆಟ್ಟಿ ತಿಳಿಸಿದರು.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರಸ್ ಕಚೇರಿಯನ್ನು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 2-3 ತಿಂಗಳ ಹಿಂದೆ ಯುವ ಕಾಂಗ್ರೆಸ್‍ಗೆ ವಿವಿಧ ಹಂತದಲ್ಲಿ ಚುನಾವಣೆ ನಡೆದಿದ್ದು ಇದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ಆಯ್ಕೆ ಮಾಡಲಾಯಿತು. ಇವರಿಗೆ ಅಧಿಕಾರವನ್ನು ನೀಡುವ ಸಲುವಾಗಿ ಮಾ. 17 ರಂದು ಬೆಂಗಳೂರಿನಲ್ಲಿ ಯುವ ಸಂಕಲ್ಪ ಹೆಸರಿನಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ, ಇದರಲ್ಲಿ ರಾಜ್ಯ ಮಟ್ಟದಿಂದ ಹಿಡಿದು ಬ್ಲಾಕ್ ಮಟ್ಟದವರೆಗೂ ಸಹಾ ಪದಾಧಿಕಾರಿಗಳು ಪದಗ್ರಹಣ ಮಾಡಲಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾರೆಹಳ್ಳಿ ಉಲ್ಲಾಸ್ ಮಾತನಾಡಿ, ಈ ಸಮಾರಂಭಕ್ಕೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 5 ಲಕ್ಷ ಯುವ ಕಾರ್ಯಕರ್ತರು ಆಗಮಿಸಲಿದ್ದಾರೆ, ಸಮಾರಂಭಕ್ಕೆ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್, ರಾಜ್ಯದಿಂದ ಚುನಾಯಿತರಾದ ಸಂಸದರು, ಸಚಿವರು, ಶಾಸಕರು ವಿಧಾನ ಪರಿಷತ್ ಸದಸ್ಯರು, ಪಕ್ಷದ ಅಭೀಮಾನಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಮಾರಂಭಕ್ಕೆ ಚಿತ್ರದುರ್ಗ ಜಿಲ್ಲೆಯಿಂದ 50ಕ್ಕೂ ಹೆಚ್ಚು ಬಸ್ಸ್‍ಗಳು 100ಕ್ಕೂ ಹೆಚ್ಚು ಕ್ರೋಜರ್‍ಗಳು ಹೋಗಲಿವೆ, ಇದರ ಉಸ್ತುವಾರಿಗಳನ್ನು ಆಯಾ ತಾಲ್ಲೂಕು ಮಟ್ಟದ ಬ್ಲಾಕ್ ಅಧ್ಯಕ್ಷರುಗಳಿಗೆ ನೀಡಲಾಗಿದೆ, ಹೆಚ್ಚಿನ ಮಾಹಿತಿಗಾಗಿ ನನನ್ನು ಸಂಪರ್ಕ ಮಾಡಬಹುದಾಗಿದೆ ಎಂದ ಅವರು, ರಾಜ್ಯ ಮಟ್ಟದಲ್ಲಿ ಪದಾಧಿಕಾರಿಗಳ ಪದಗ್ರಹಣ ಆದ ಮೇಲೆ ಜಿಲ್ಲಾ ಮಟ್ಟದಲ್ಲಿಯೂ ಸಹಾ ಪದಗ್ರಹಣ ಸಮಾರಂಭವನ್ನು ನಡೆಸಲಾಗುವುದು, ರಾಜ್ಯ ಮಟ್ಟದ ಪದಗ್ರಹಣ ಸಮಾರಂಭವೂ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ನಡೆಯಲಿದೆ. ಪದಗ್ರಹಣ ಸಮಾರಂಭದ ನಂತರ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಯುವ ಪದಾಧಿಕಾರಿಗಳಿಗೆ ಪಕ್ಷದ ಬಗ್ಗೆ ಅದರ ತತ್ವ ಸಿದ್ದಾಂತಗಳನ್ನು ತಿಳಿಸುವ ಸಲುವಾಗಿ ತರಬೇತಿಯನ್ನು ನೀಡುವುದರ ಮೂಲಕ ಅವರನ್ನು ಪಕ್ಷದ ನಿಷ್ಠಾವಂತ ಸಿಪಾಯಿಗಳನ್ನಾಗಿ ಮಾಡಲಾಗುವುದು ಎಂದರು.
ಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಸುನೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್ ತಾಲ್ಲೂಕು ಅಧ್ಯಕ್ಷ ಆದರ್ಶ ಶ್ಯಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

