ಬೆಂಗಳೂರು; ಇಂದು ಬೆಳಗ್ಗೆಯಿಂದ ದರ್ಶನ್ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಆರು ಜನರನ್ನ ಅನ್ ಫಾಲೋ ಮಾಡಿರುವ ವಿಚಾರ ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮ ಅಕ್ಕನ ಮಗನ ವಿಡಿಯೋವೊಂದನ್ನ ಹಂಚಿಕೊಂಡು ಬೇಸರ ಹೊರ ಹಾಕಿದ್ದಾರೆ. ದರ್ಶನ್ ಅವರ ಕ್ಕನ ಮಗ ಚಂದು ಅವರ ವಿಡಿಯೋ ಬೇಸರ ತರಿಸಿದೆ.

ಇತ್ತೀಚೆಗಷ್ಟೇ ಚಂದು ಅವರ ಕಾಲಿಗೆ ಅಭಿಮಾನಿಗಳು ಬಿದ್ದಿದ್ದರು. ಈ ವಿಡಿಯೋ ಎಲ್ಲೆಡೆ ವಿಡಿಯೋ ವೈರಲ್ ಆಗಿದೆ. ಇದೇ ವಿಡಿಯೋ ಈಗ ದರ್ಶನ್ ಅವರ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕಿ ತಮ್ಮ ಸೆಲೆಬ್ರೆಟಿಗಳಲ್ಲಿ ಮನವಿಯೊಂದನ್ನ ಮಾಡಿದ್ದಾರೆ.

‘ಎಲ್ಲಾ ನನ್ನ ಸೆಲೆಬ್ರೆಟಿಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವೂ ಸದಾ ಚಿರೃಣಿ. ಆದರೆ ಈ ವಿಡಿಯೋದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದೆ ಇರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದು ನೋಡಿ ನನ್ನಮನಸ್ಸಿಗೆ ತುಂಬಾ ನೋವಾಗಿದೆ. ಆದ್ದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗೆ ಇಡಲಾಗಿದೆ. ಚಂದು ಅಥವಾ ನನ್ನ ಮಗ ವಿನೀಶ್ ಗೆ ನೀವು ಅಭಿಮನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರಡ ನನಗೆ ಹತ್ತಿರವಾಗಬಹುದು ಎಂದು ನೀವೂ ಭಾವಿಸಿದ್ದರೆ ಅದನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ ನೀವೂ ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ ಎಂದಿದ್ದಾರೆ.

