ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಂಬರೀಶ್ ಎಂದರೆ ಅಪಾರ ಪ್ರೀತಿ, ಗೌರವ. ಹಾಗೇ ಅವರ ಕುಟುಂಬದವರ ಮೇಲೂ ಇತ್ತು. ಅದರಲ್ಲೂ ಸುಮಲತಾ ಅವರನ್ನ ಮದರ್ ಇಂಡಿಯಾ ಅಂತಾನೇ ಕರೆಯುತ್ತಿದ್ದರು. ಅಭಿಷೇಕ್ ಅವರನ್ನ ತಮ್ಮ ಎನ್ನುತ್ತಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ವಾಸ ಅನುಭವಿಸಿ ಬಂದ ಮೇಲೆ ದರ್ಶನ್ ಬದಲಾಗಿದ್ದಾರೆ. ಒಂದಷ್ಟು ಜನರಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ.

ಈಗಂತೂ ದರ್ಶನ್ ಅವರನ್ನ ಭೇಟಿ ಮಾಡುವುದಕ್ಕೂ ವಿಜಯಲಕ್ಷ್ಮಿ ಹಾಗೂ ದಿನಕರ್ ಅವರನ್ನೇ ಸಂಪರ್ಕ ಮಾಡಬೇಕು. ದರ್ಶನ್ ಅವರ ಎಲ್ಲಾ ಜವಾಬ್ದಾರಿಯನ್ನು ಪತ್ನಿ ಹಾಗೂ ತಮ್ಮ ಹೊತ್ತುಕೊಂಡಿದ್ದಾರೆ. ಹಾಗೇ ದರ್ಶನ್ ಕೂಡ ಮೈಸೂರಿನಲ್ಲಿಯೇ ಉಳಿದುಕೊಂಡಿದ್ದು, ವೀಕೆಂಡ್ ನಲ್ಲಿ ಕುಟುಂಬದವರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ಬಹುನಿರೀಕ್ಷಿತ ಸಿನಿಮಾ ಡೆವಿಲ್ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ. ಜೈಲು ಸೇರುವ ಮುನ್ನವೆ ಡೆವಿಲ್ ಸಿನಿಮಾ ಅರ್ಧ ಆಗಿತ್ತು. ಈಗ ಮತ್ತೆ ಶುರುವಾಗಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ. ಇದರ ನಡುವೆ ಶಾಕಿಂಗ್ ನ್ಯೂಸ್ ದರ್ಶನ್ ಅವರ ಸೋಷಿಯಲ್ ಮೀಡಿಯಾ ನೋಡಿದಾಗ ತಿಳಿದು ಬಂದಿದೆ.

ದರ್ಶನ್ ತಮ್ಮ Instagram ಖಾತೆಯಲ್ಲಿ ಈ ಮೊದಲು ಆರು ಜನರನ್ನ ಫಾಲೋ ಮಾಡ್ತಾ ಇದ್ರು. ಈಗ ಅವರನ್ನೆಲ್ಲಾ ಅನ್ ಫಾಲೋ ಮಾಡಿದ್ದಾರೆ. ಮದರ್ ಇಂಡಿಯಾ ಅಂತ ಕರೆಯೋ ಸುಮಲತಾ ಅಂಬರೀಶ್ ಅವರನ್ನ ಸನ್ ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲ ಅಭಿಷೇಕ್ ಅಂಬರೀಶ್, ಅವಿವಾರನ್ನು ಅನ್ ಫಾಲೋ ಮಾಡಿದ್ದು, ಮಗ ವಿನೀಶ್, ದಿನಕರ್ ತೂಗುದೀಪ, ಡಿ ಕಂಪನಿಯನ್ನು ಆ ಲೀಸ್ಟ್ ನಿಂದ ತೆಗೆದಿದ್ದಾರೆ. ಮಗ, ತಮ್ಮ ಹಾಗೂ ಡಿ ಕಂಪನಿಯನ್ನ ಅನ್ ಫಾಲೋ ಮಾಡಿದರ ಹಿಂದೆ ಯಾವ ಉದ್ದೇಶ ಇರೋದಿಲ್ಲ. ಆದರೆ ಅಂಬರೀಶ್ ಕುಟುಂಬವನ್ನ ಅನ್ ಫಾಲೋ ಮಾಡಿದ್ಯಾಕೆ ಎಂಬ ಪ್ರಶ್ನೆ ಎಲ್ಲರ ತಲೆಗೂ ಹೊಕ್ಕಿದೆ.

