ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 11 : ರಿದ್ದಿ ಫೌಂಡೇಶನ್ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಡೆಂಟಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಗೌರಮ್ಮ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದರೆ ಸಾಲದು ಎಲ್ಲಾ ರಂಗಗಳಲ್ಲಿಯೂ ಹೆಣ್ಣಿಗೆ ಸಿಗಬೇಕಾದ ಸಮಾನ ಸ್ಥಾನಮಾನ ಗೌರವ ಹಕ್ಕುಗಳು ದೊರಯಬೇಕು. ಹೆಣ್ಣನ್ನು ಕೇವಲ ಅಡುಗೆ ಮನೆಗೆ ಮಾತ್ರ ಮೀಸಲು ಎನ್ನುವ ಕಲ್ಪನೆ ಎಲ್ಲರಲ್ಲಿಯೂ ಇದೆ. ಪುರುಷನಿಗೆ ಸಮಾನವಾಗಿ ಹೆಣ್ಣು ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿದ್ದಾಳೆಂದು ಹೇಳಿದರು.
ನಿವೃತ್ತ ಉಪನ್ಯಾಸಕಿ ರೋಹಿಣಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಅನಾದಿ ಕಾಲದಿಂದಲೂ ಹೆಣ್ಣು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ಅನುಭವಿಸಿಕೊಂಡು ಬರುತ್ತಿದ್ದಾಳೆ. ಕಾನೂನಿನಡಿ ಹೆಣ್ಣಿಗೆ ರಕ್ಷಣೆಯಿದೆ. ತನ್ನ ಮೇಲಾಗುವ ದೌರ್ಜನ್ಯ, ದಬ್ಬಾಳಿಕೆ, ಶೋಷಣೆಯನ್ನು ಮೆಟ್ಟಿ ನಿಂತು ಮಹಿಳೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ತಿಳಿಸಿದರು.
21 ನೇ ಶತಮಾನದಲ್ಲಿ ಹೆಣ್ಣು ಕೂಡ ಶಿಕ್ಷಣವಂತಳಾಗಿ ಎಲ್ಲಾ ರಂಗಗಳಲ್ಲಿಯೂ ಸಾಧನೆ ಮಾಡುತ್ತಿದ್ದಾಳೆಂದರು.
ಅಂಬಮ್ಮ, ಶೋಭ ಇವರುಗಳನ್ನು ಸನ್ಮಾನಿಸಲಾಯಿತು.
ರಿದ್ದಿ ಫೌಂಡೇಶನ್ ಖಜಾಂಚಿ ಶೋಭ, ಕಾರ್ಯದರ್ಶಿ ಮಮತ, ಪ್ರಿಯದರ್ಶಿನಿ, ಶಿವಮ್ಮ, ಸಿಂಧು ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

