ದಾವಣಗೆರೆ; ಅಡಿಕೆ ಬೆಲೆ ಕೂಡ ಒಂದೊಮದು ಮಾರುಕಟ್ಟೆಯಲ್ಲಿ ಒಂದೊಂದು ರೀತಿ ಇರಲಿದೆ. ದಾವಣಗೆರೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತವನ್ನ ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಆದರೆ ಅಡಿಕೆ ಬೆಳೆಗಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿಯೇ ಇದ್ದಾರೆ. ಹೀಗಾಗಿ ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಎಷ್ಟಕ್ಕೆ ಹೋಯ್ತು ಎಂಬ ಕುತೂಹಲ ಇದ್ದೆ ಇರುತ್ತದೆ. ಆ ಮಾಹಿತಿ ಇಲ್ಲಿದೆ ನೋಡಿ.

ಕ್ವಿಂಟಾಲ್ ಅಡಿಕೆಯ ಗರಿಷ್ಠ ದರ 52,279 ರೂಪಾಯಿ ಇದೆ. ಕಳೆದ ದಿನದ ಮಾರುಕಟ್ಟೆಯ ದರಕ್ಕೆ ಹೋಲಿಕೆ ಮಾಡಿದರೆ ಸುಮಾರು 179 ರೂಪಾಯಿ ಏರಿಕೆಯಾಗಿದೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದೆ. ಬೇಸಿಗೆ ಆಗಿರೋ ಕಾರಣ ಬಿಸಿಲು ಜಾಸ್ತಿ, ಈ ಬಿರು ಬೇಸಿಗೆಯಲ್ಲಿ ಅಡಿಕೆ ಗಿಡಗಳನ್ನ ಕಾಪಾಡಿಕೊಳ್ಳುವುದೇ ರೈತನಿಗೆ ಒಂದು ದೊಡ್ಡ ಟಾಸ್ಕ್ ಆಗಿದೆ. ಹೀಗಾಗಿ ಅಡಿಕೆ ಬೆಲೆ ಜಾಸ್ತಿಯಾಗಿರೋದಕ್ಕೆ ರೈತನ ಮೊಗದಲ್ಲಿ ಕೊಂಚ ನೆಮ್ಮದಿಯ ನಗು ಕಾಣಿಸುತ್ತಿದೆ.

ಚನ್ನಗಿರಿ ಅಡಿಕೆ ಧಾರಣೆ ಗರಿಷ್ಠ 52,279 ರೂಪಾಯಿ ಆಗಿದೆ. ಹಾಗೇ ಕನಿಷ್ಠ 43,000 ರೂಪಾಯಿ ಇತ್ತು. ಬೆಟ್ಟೆ ಅಡಿಕೆ ಗರಿಷ್ಠ 24,786 ರೂಪಾಯಿ ಇದೆ. ಗರಿಷ್ಠ ದರ 17,659 ರೂಪಾಯಿ ಇತ್ತು. ಇನ್ನು ಜನವರಿಯಲ್ಲಿ 52 ಸಾವಿರದ ಒಳಗಿದ್ದ ಅಡಿಕೆ, ಫೆಬ್ರವರಿಯಲ್ಲಿ 53 ಸಾವಿರದ ಗಡಿ ದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿಯೇ ಅಡಿಕೆ ಬೆಳೆಗಾರರಿಗೆ ಕೊಂಚ ಸಮಾಧಾನವಾಗುವಂತ ದರ ಕಂಡು ಬಂದಿದೆ. ಅಡಿಕೆ ದರ ಹೀಗೆ ಏರಿಕೆಯಾದರೆ ರೈತರಿಗೂ ಒಂದು ನೆಮ್ಮದಿ. ಯಾಕಂದ್ರೆ ಅಡಿಕೆ ಬೆಳೆಗೆ ನೀರನ್ನ ಒದಗಿಸೋದು ಒಂದೇ ಸವಾಲಿನ ಕೆಲಸವಲ್ಲ, ಜೊತೆಗೆ ರೋಗಗಳಿಂದಾನು ಅಡಿಕೆ ಬೆಳೆಯನ್ನ ಕಾಪಾಡಿಕೊಳ್ಳಬೇಕಾಗಿದೆ.

