ಬೆಂಗಳೂರು; ಇಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ ಬಜೆಟ್ ಅನ್ನ ಮಂಡನೆ ಮಾಡಿದ್ದಾರೆ. ಈ ಬಜೆಟ್ ನೋಡಿ ಬಿಜೆಪಿ ಟೀಕೆ ಮಾಡಿದ್ದು, ಇದೊಂದು ಸಾಬರ ಬಜೆಟ್, ಹಲಾಲ್ ಬಜೆಟ್, ರಂಜಾನ್ ವೇಳೆ ಒಳ್ಳೆ ಗಿಫ್ಟ್ ನೀಡಿದ್ದಾರೆಂದೆಲ್ಲ ಟೀಕೆ ಮಾಡಿದ್ದಾರೆ. ವಿರೋಧ ಪಕ್ಷಗಳ ಟೀಕೆಗೆ ಸಿಎಂ ಸಿದ್ದರಾಮಯ್ಯ ಇದೀಗ ತಿರುಗೇಟು ನೀಡಿದ್ದಾರೆ.

ಬಜೆಟ್ ಮುಗಿದ ಬಳಿಕ ಮಾತನಾಡಿದ ಸಿಎಂ, ರಾಜ್ಯದ ಅಲ್ಪಸಂಖ್ಯಾತರಿಗೂ ಹಣ ಜಾಸ್ತಿ ಮಾಡಿದ್ದೇವೆ. ಅಲ್ಪಸಂಖ್ಯಾತರು ಅಂದ್ರೆ ಬರೀ ಮುಸ್ಲಿಂರು ಮಾತ್ರವಲ್ಲ, ಕ್ರಿಶ್ಚಿಯನ್ ಅಭಿವೃದ್ಧಿಗೂ ಹಣ ಮೀಸಲಿಟ್ಟಿದ್ದೇವೆ. ಆದರೆ ಬಿಜೆಪಿಯವರು ಹಲಾಲ್ ಬಜೆಟ್ ಎಂದು ಕರೆದಿದ್ದಾರೆ. ಬಿಜೆಪಿಯವರ ಮನಸ್ಸಿನ ಕೊಳಕು ಹೊರಗೆ ಬರುತ್ತಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡೋದು ಬೇಡ್ವಾ..? ಅಲ್ಪಸಂಖ್ಯಾತರಿಗೆ ಶಿಕ್ಷಣ ಸರಿಯಾಗಿಲ್ಲ. ಅವರ ಶೈಕ್ಷಣಿಕ ಪ್ರಮಾಣ ಕಡಿಮೆ. ನಾವೂ ಸಮಾನತೆಯಲ್ಲಿ ನಂಬಿಕೆ ಇಟ್ಟುಕೊಂಡವರು. ಅದಕ್ಕೆ ಆ ರೀತಿ ಮಾಡಿದ್ದೇವೆ.

ಅವರು ಜಾತ್ಯಾತೀತತೆಯ ವಿರುದ್ಧವೇ ಇದ್ದಾರೆ. ಸಂವಿಧಾನ ಹೇಳೊದಂತೆ ನಾವೂ ನಡೆದುಕೊಂಡಿದ್ದೇವೆ. ಬಿಜೆಪಿಯವರಿಗೆ ಅಸೆಂಬ್ಲಿಯಲ್ಲಿಯೇ ಉತ್ತರ ಕೊಡುತ್ತೇವೆ. ಬಿಜೆಪಿಯವರು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ. ಬಜೆಟ್ ದೂರದೃಷ್ಟಿ, ಸಮಾನತೆ ಆರ್ಥಿಕ ಸಾಮಾಜಿಕ ಬೆಳವಣಿಗೆ ಇರುವ ಬಜೆಟ್ ಬಜೆಟ್ ಇದಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಮಾತನಾಡಿ, ನಮಗೆ ಎಲ್ಲಾ ವರ್ಗಕ್ಕೂ ನ್ಯಾಯ ಸಿಗಬೇಕು. ಅಲ್ಪಸಂಖ್ಯಾತರು ಪಂಚರ್ ಹಾಕೋರು ಅಂತ ತೇಜಸ್ವಿ ಸೂರ್ಯ ಹೇಳಿದ್ದಾರೆ. ಅವರು ಪಂಕ್ಚರ್ ಹಾಕೋದು ಬೇಡ. ಈ ರೀತಿ ಬಿಡ್ಲಿಂಗ್ ಕಟ್ಟಬೇಕು ಎಂಬುದು ನಮ್ಮ ಇಚ್ಚೆ ಎಂದಿದ್ದಾರೆ.

