ಬೆಂಗಳೂರು: ಸದ್ಯಕ್ಕೆ ಕೊರೊನಾ ರೂಪಾಂತರಿ ಒಮಿಕ್ರಾನ್ ಎಲ್ಲೆಡೆ ಸಾಕಷ್ಟು ಭಯ ಹುಟ್ಟಿಸಿದೆ. ಈ ನಡುವೆ ಬೇರೆ ದೇಶಗಳಿಂದ ಬರುವಂತ ಜನರಿಗೆ ಏರ್ಪೋರ್ಟ್ ನಲ್ಲಿಯೇ ತಪಾಸಣೆ ಮಾಡಿ, ಪಾಸಿಟಿವ್ ಕಂಡು ಬಂದರೆ ಅವರನ್ನ ನೇರವಾಗಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇಂದು ಬೆಳಗ್ಗೆ ಜರ್ಮನಿಯಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಲ್ಲಿ ಒಬ್ಬ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ನಾಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.
ಬೆಳಗ್ಗೆ ಜರ್ಮನಿಯಿಂದ ಬಂದ ಪ್ರಯಾಣಿಕರಿಗೆ ಆರ್ಟಿಪಿಆರ್ ಟೆಸ್ಟ್ ಮಾಡಲಾಗಿದೆ. ಈ ವೇಳೆ ಪ್ರಯಾಣಿಕಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಬಳಿಕ ಅವರಲ್ಲಿ ಒಬ್ಬನನ್ನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ನೊಬ್ಬ ಅದೇಗೋ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.
ಏರ್ಪೋರ್ಟ್ನಲ್ಲಿ ಅಷ್ಟೊಂದು ಜನರಿದ್ದರು, ಅಧಿಕಾರಿಗಳ ಕಣ್ಗಾವಲಿದ್ದರು ಸೋಂಕಿತ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ. ಸದ್ಯ ಆತನ ಹುಡುಕಾಟದಲ್ಲಿ ಅಧಿಕಾರಿಗಳಿದ್ದಾರೆ. ಓಮಿಕಾನ್ ಹೆಚ್ಚಾಗುತ್ತಿರುವ ಭಯದ ನಡುವೆ ಹೀಗೆ ಸೋಂಕಿತರು ಎಸ್ಕೇಪ್ ಆಗ್ತಿರೋದು ಮತ್ತಷ್ಟು ಭಯದ ವಾತಾವರಣಕ್ಕೆ ಎಡೆ ಮಾಡಿಕೊಟ್ಟಿದೆ.