ಬಳ್ಳಾರಿಗೂ ಬಂತು ಹಕ್ಕಿಜ್ವರ : ಒಂದೇ ವಾರಕ್ಕೆ ಸತ್ತದ್ದು ಎಷ್ಟು ಸಾವಿರ ಕೋಳಿಗಳು..?

suddionenews
1 Min Read

 

 

ಬಳ್ಳಾರಿ : ಬಿರು ಬೇಸಿಗೆಯ ನಡುವೆ ಹಕ್ಕಿ ಜ್ವರದ ಆತಂಕವೂ ಹೆಚ್ಚಾಗಿದೆ. ಚಿಕ್ಕಬಳ್ಳಾಪುರದಲ್ಲಿ ಕಾಣಿಸಿಕೊಂಡಿದ್ದ ಹಕ್ಕಿಜ್ವರ ಇದೀಗ ಬಳ್ಳಾರಿಗೂ ಕಾಲಿಟ್ಟಿದೆ. ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ ಸರ್ಕಾರಿ ಫೌಲ್ಟ್ರೀ ಫಾರ್ಮ್ ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದರ ಪರಿಣಾಮ ಇದೀಗ ಸಾವಿರಾರು ಕೋಳಿಗಳು ಸಾವಾಗಿವೆ. ಇದರಿಂದ ಸ್ಥಳೀಯ ಜನರಿಗೆ ಆತಂಕ ಎದುರಾಗಿದೆ.

ಹಕ್ಕಿ ಜ್ವರದಿಂದ 2,400 ಕೋಳಿಗಳು ಸಾವನ್ನಪ್ಪಿವೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಮಾಹಿತಿ ನೀಡಿದ್ದಾರೆ. ಫೆಬ್ರವರಿ 21ರಿಂದ ಇಲ್ಲಿಯವರೆಗೆ ಅಂದ್ರೆ ಕೇವಲ ಒಂದೇ ವಾರಕ್ಕೆ 2,400 ಕೋಳಿಗಳು ಮೃತಪಟ್ಟಿವೆ. ಸತ್ತ ಕೋಳಿಗಳ ಮಾದರಿ ಸಂಗ್ರಹಿಸಿ ಮಧ್ಯಪ್ರದೇಶದ ಭೂಪಾಲ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟಿ ಅನಿಮಲ್ ಆಫ್ ದಿಸೀಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ ಕೋಳಿಗಳಿಗೆ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ.

ಇನ್ನು ಈ ಸೋಂಕು ಆಂಧ್ರಪ್ರದೇಶ, ತೆಲಂಗಾಣದಿಂದ ಹರಡಿರುವ ಸಾಧ್ಯತೆಯೂ ಇದೆ. ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆ ಅಲ್ಲಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲೆಯಲ್ಲಿ ಅಗತ್ಯಕ್ರಮಗಳನ್ನ ಕೈಗೊಂಡಿದೆ. ಕುರೇಕುಪ್ಪ ಗ್ರಾಮದ ಸುತ್ತಲಿನ ಒಂದು ಕಿಲೋ ಮೀಟರ್ ದೂರವನ್ನು ಅಪಾಯಕಾರಿ ವಲಯವೆಂದು ಗುರುತು ಮಾಡಲಾಗಿದೆ. ಸದ್ಯ ಆ ವಲಯದ ಜನರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ. ಹಕ್ಕಿ ಜ್ವರ ಬಂದಿದೆ ಎಂದು ತಿಳಿದ ಬಳಿಕ ಸ್ಥಳೀಯರು ಸಹಜವಾಗಿಯೇ ಆತಂಕಗೊಂಡಿದ್ದಾರೆ. ಅದು ಬೇರೆ ಸಾವಿರಾರು ಸಂಖ್ಯೆಯಲ್ಲಿ ಕೋಳಿಗಳು ಸಾವನ್ನಪ್ಪಿರುವುದು ಅದರ ಮಾಲೀಕನಿಗೂ ನೋವು ತಂದಿದೆ. ಸಾವಿರಾರು ರೂಪಾಯಿ‌ ನಷ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *