ವಿಚ್ಛೇದನದ ಬಳಿಕ ಸಮಂತಾ ಮನಸ್ಥಿತಿ ಹೇಗಿದೆ..?

1 Min Read

ಸಮಂತಾ, ಅಕ್ಕಿನೇನಿ ಕುಟುಂಬದ ಕುಡಿ ನಾಗಚೈತನ್ಯ ಅವರನ್ನ ಪ್ರೀತಿಸಿ ಮದುವೆಯಾಗಿದ್ದರು. ಅದು ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ವರ್ಷಗಳ ಒಡನಾಟವದು. ಆದ್ರೆ ಅದೇನಾಯ್ತೊ ಏನೊ ಅವರಿಬ್ಬರಿಗೆ ಮಾತ್ರ ಗೊತ್ತು. ಸಾಂಸಾರಿಕ ಜೀವನ ಮೂರೂವರೆ ವರ್ಷಕ್ಕೇನೆ ಕೊನೆಯಾಯ್ತು. ಆದ್ರೆ ಆ ಬಳಿಕ ಸಮಂತಾನೆ ಹೆಚ್ಚು ಟ್ರೋಲ್ ಗೂ ಒಳಗಾಗಿದ್ರು.

ಟ್ರೋಲ್ ಎಲ್ಲಾ ಬಿಡಿ ಪಬ್ಲಿಕ್ ಫಿಗರ್ ಅಂದ್ರೆ ಈ ಟ್ರೋಲ್ ನವರಿಗೆ ಮೊದಲ ಆಸ್ತಿ ಅವ್ರೆ. ಆದ್ರೆ ಪ್ರೀತಿಸಿ ಮದುವೆಯಾದ ಸಮಂತಾ ಇದ್ದಕ್ಕಿದ್ದ ಹಾಗೇ ಹೀಗೆ ದೂರ ಆಗ್ಬಿಟ್ರೆ ಹೇಗಿರ್ತಾರೆ ಅನ್ನೋ ಪ್ರಶ್ನೆ ಅಂತು ಅಭಿಮಾನಗಳ ಮನಸ್ಸಲ್ಲಿ ಈಗ್ಲು ಕಾಡ್ತಾ ಇದೆ. ಆದ್ರೆ ಡಿವೋರ್ಸ್ ಆದ ಬಳಿಕ ಸಮಂತಾ ಎಲ್ಲೂ ಅಷ್ಟಾಗಿ ಮನಬಿಚ್ಚಿ ಮಾತಾಡಿರಲಿಲ್ಲ. ಆದ್ರೆ ಇದೀಗ ಫಿಲ್ಮ್ ಫೇರ್ ಸಂದರ್ಶನದಲ್ಲಿ ತಮ್ಮೆಲ್ಲಾ ನೋವನ್ನ ಹಂಚಿಕೊಂಡಿದ್ದಾರೆ.

ಈ ಬಗ್ಗೆ ನಾತನಾಡಿರುವ ಸಮಂತಾ, ನನ್ನನ್ನು ನಾನು ದುರ್ಬಲ ಮನಸ್ಥಿತಿಯವಳು ಅಂದುಕೊಂಡಿದ್ದೆ. ಡಿವೋರ್ಸ್ ಬಳಿಕ ಕುಗ್ಗಿ ಹೋಗ್ತೀನಿ, ಆತ್ಮಹತ್ಯೆಯನ್ನು ಮಾಡಿಕೊಳ್ಳಬಹುದೇನೋ ಅಂದುಕೊಂಡಿದ್ದೆ. ಆದ್ರೆ ಈಗ ಪರಿಸ್ಥಿತಿ ಆಗಿಲ್ಲ. ನಾನು ತುಂಬಾ ಸ್ಟ್ರಾಂಗ್ ಇದ್ದೀನಿ ಅಂತ ತಿಳೀತು. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಗಳು ಬರುತ್ತವೆ. ಅವುಗಳನ್ನ ಸ್ವೀಕರಿಸಿ,‌ ಮುನ್ನಡೆಯಬೇಕು ಅಷ್ಟೇ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *