ಬೆಂಗಳೂರು; ಕರ್ನಾಟಕ ಸರ್ಕಾರದ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯೂ ಒಂದು. ಕಳೆದ ಕೆಲವು ತಿಂಗಳಿನಿಂದ ಈ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಮಹಿಳರಯರು ರೊಚ್ಚಿಗೆದ್ದಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಹೌಹಾರಿದ್ದಾರೆ. ಈ ಸಂಬಂಧ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮೀ ಹಣ ನಿಮ್ಮ ನಿಮ್ಮ ಖಾತೆಗಳಿಗೆ ಯಾವ ಸಮಯಕ್ಕೆ ಬರಲಿದೆ ಎಂಬುದನ್ನು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರೋ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳೆಯರ ಖಾತೆಗೆ ಮುಂದಿನ 8 ದಿನಗಳ ಒಳಗೆಯಜಮಾನಿಯರ ಖಾತೆಗೆ ಹಣ ಜಮೆಯಾಗಲಿದೆ. ಬಿಜೆಪಿಯವರು ಅಪಪ್ರಚಾರ ಮಾಡಿಕೊಂಡೆ ತಿರುಗಲಿ. ನಾವೂ ಈಗಾಗಲೇ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದೇವೆ. ಯಾವುದೇ ಕಾರಣಕ್ಕೂ ಹಣ ನಿಲ್ಲೋದಿಲ್ಲ. 8-10 ದಿನದಲ್ಲಿ ಹಣ ಬರುತ್ತೆ ಎಂದು ಹೇಳಿದ್ದೆ. ಅದರಲ್ಲಿ ಎರಡು ದಿನ ಕಳೆದಿದೆ. ಇನ್ನು ಎಂಟು ದಿನದಲ್ಲಿ ಹಣ ಬರಲಿದೆ. ರಸ್ತೆ ಅಪಘಾತವಾದ ಕಾರಣ ನಾನು ವಿಶ್ರಾಂತಿಯಲ್ಲಿದ್ದೆ. ಈಗ ಚೇತರಿಸಿಕೊಳ್ಳುತ್ತಿದ್ದೇನೆ. ಇನ್ನು ಎಂಟು ದಿನಗಳ ಒಳಗೆ ಹಣ ಬರಲಿದೆ. ಈ ಬಾರಿ ಹಿಸ ಮಾದರಿಯಲ್ಲಿ ಹಣ ಜಮಾವಣೆಯಾಗುತ್ತಿದೆ. ಬೆಂಗಳೂರಿನ ಸುತ್ತಮುತ್ತಲಿನ ಐದು ತಾಲೂಕು ಪಂಚಾಯತಿಗಳಿಗೆ ಹಣ ನೀಡಿದ್ದೇವೆ. ಅಲ್ಲಿದ್ದ ಸಿಡಿಪಿಒ ಮೂಲಕ ಹಣ ಬಿಡುಗಡೆ ಮಾಡಲಾಯ್ತು ಎಂದಿದ್ದಾರೆ.

ಇನ್ನು ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಬಗ್ಗೆ ಮಾತನಾಡಿ, ಇಂತಹ ಘಟನೆಗಳನ್ನು ಖಂಡಿಸುತ್ತೇನೆ. ಘಟನೆ ನಡೆದು ತಕ್ಷಣ ಕಮಿಷನರ್ ಬಳಿ ಮಾತನಾಡಿದೆ. ತಪ್ಪಿತಸ್ಥರನ್ನು ಅರೆಸ್ಟ್ ಮಾಡುವಂತೆ ಹೇಳಿದ್ದೇನೆ. ಮೊದಲು ನಾವೆಲ್ಲ ಕನ್ನಡಿಗರು. ಕೆಲ ಪುಂಡರು ಮಾಡಿರುವ ಗಲಾಟೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.

