ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 23 : ಮಕ್ಕಳ ಅರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವಹಿಸಿ ಜಂಕ್ ಪುಡ್ ಕಡೆಗೆ ಅವರ ಮನಸ್ಸು ಜಾರದಂತೆ ಪೋಷಕರು ಜಾಗೃತಿ ವಹಿಸಬೇಕು ಎಂದು ಮಕ್ಕಳ ತಜ್ಞರಾದ ಡಾ.ಪೃಥ್ವೀಶ್ ಸಲಹೆ ನೀಡಿದರು.

ನಗರದ ಶ್ರೀ ವೆಂಕಟರಮಣ ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಸವೇಶ್ವರ ನಗರದ ಶ್ರೀ ಸಾಯಿ ಲಿಟ್ಲ್ ಹಾರ್ಟ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳ ಅರೋಗ್ಯ ಸುಧಾರಣೆಗೆ ನ್ಯೂಟ್ರಿಷನ್ ಯುಕ್ತ ಪದಾರ್ಥಗಳು, ಹಣ್ಣು, ತರಕಾರಿಗಳನ್ನು ಯಥೇಚ್ಛವಾಗಿ ನೀಡಬೇಕೆಂದರು. ಮಗುವಿನ ಬೆಳವಣಿಗೆಯ ಮೊದಲೆರಡು ವರ್ಷಗಳ ಅವದಿಯಲ್ಲಿ ಮಕ್ಕಳಿಗೆ ಮೊಬೈಲ್ ನೀಡಲೇಬಾರದು. ಮೊಬೈಲ್ ಹಾಗೂ ಟಿವಿ ನೋಡಲು ಹೆಚ್ಚು ಸಮಯ ವ್ಯರ್ಥ ಮಾಡದೆ, ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ಮಕ್ಕಳು ತೊಡಗಿ ಕೊಳ್ಳುವಂತೆ ಪೋಷಕರು ಮೇಲ್ವಿಚಾರಣೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ನಾಗಭೂಷಣ್, ಪವಿತ್ರ ನಾಗಭೂಷಣ್, ತಾ.ಪಂ ಮಾಜಿ ಸದಸ್ಯರಾದ ಈರಣ್ಣ, ಆರ್. ವಿಜಯಕುಮಾರ್, ಶಾಲೆಯ ಪ್ರಿನ್ಸಿಪಾಲ್ ಜಲಜಾಕ್ಷಿ ಬಿ.ಜೆ, ಶಿಕ್ಷಕಿಯರಾದ ಚೂಡಾಮಣಿ, ಗೀತಾ, ನಾಗವೇಣಿ, ಕವಿತಾ ಸೇರಿದಂತೆ ಪೋಷಕರು ವಿದ್ಯಾರ್ಥಿಗಳು ಇದ್ದರು.


