ಸುದ್ದಿಒನ್, ಕೊಪ್ಪಳ, ಫೆಬ್ರವರಿ. 19 : ರಾಜ್ಯ ಸರಕಾರಿ ನೌಕರರ ಸಂಘದ ಪ್ರಚಾರ ಹಾಗೂ ಸಂಘಟನಾ ಸಮಿತಿಯ ಸದಸ್ಯರನ್ನಾಗಿ ನಗರದ ಬಹದ್ದೂರಬಂಡಿ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರನ್ನು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ನೇಮಕ ಮಾಡಿದ್ದಾರೆ.

ಸಂಘದ ಕಾರ್ಯಕ್ರಮ ಹಾಗೂ ಸಭೆ,ಸಮಾರಂಭಗಳ ಬಗ್ಗೆ ಪ್ರಚಾರ ಮಾಡುವುದು ಹಾಗೂ ಸಂಘದ ಸಂಘಟನೆಯ ಕುರಿತಾಗಿ ಶ್ರಮಿಸುವಂತೆ ತಿಳಿಸಿದ್ದಾರೆ. ಪ್ರಚಾರ ಹಾಗೂ ಸಂಘಟನಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿದ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರಿಗೆ ಹಾಗೂ ಅವರ ತಂಡಕ್ಕೆ ಬೀರಪ್ಪ ಅಂಡಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.


