ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕು ಎಂದುಕೊಳ್ಳುತ್ತಿರುವವರು ಈಗೊಂದು ಸಂತಸದ ಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ದೇಶಾದ್ಯಂತ ಅರ್ಜಿ ಆಹ್ವಾನಿಸಿದ್ದು, 1,194 ಹುದ್ದೆಗಳು ಖಾಲಿ ಇದಾವೆ. ಅದರಲ್ಲೂ ಬೆಂಗಳೂರಿನಲ್ಲೂ ಪೋಸ್ಟಿಂಗ್ ಇದ್ದು, 49 ಸ್ಥಾನಗಳು ಇದಾವೆ. ಹೀಗಾಗಿ ಕರ್ನಾಟಕ ರಾಜ್ಯದ ಅರ್ಹ, ಆಸಕ್ತ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆದರೆ ಮೂರು ವರ್ಷದ ಅವಧಿಗೆ ಮಾತ್ರ ಇಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದೆ. ಸಮಕಾಲಿನ ಲೆಕ್ಕ ಪರಿಶೋಧಕ ಹುದ್ದೆಗೆ ಅರ್ಜಿ ಆಹ್ವಾನ ಮಾಡಿದೆ. ವೇತನ ಶುಲ್ಕ, 45,000-80,000 ಇದೆ. ವಯಸ್ಸಿನ ಮಿತಿಯೂ ಬಹಳ ಅವಕಾಶವಿದ್ದು, 63 ವರ್ಷದ ಒಳಗಿನವರು ಅರ್ಜಿ ಹಾಕಬಹುದು. ಆಡಿಟ್, ಕ್ರೆಡಿಟ್ ಅಥವಾ ಫಾರೆಕ್ಸ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ.
ನಿನ್ನೆಯಿಂದ ಅಂದ್ರೆ ಫೆಬ್ರವರಿ18 ರಿಂದ ಅರ್ಜಿಗೆ ಅವಕಾಶ ನೀಡಲಾಗಿದೆ. ಮಾರ್ಚ್ 15 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಸರುಗಳನ್ನು ಶಾರ್ಟ್ ಲೀಸ್ಟ್ ಮಾಡಿ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. https://bank.sbi/web/careers ಈ ವೆಬ್ಸೈಟ್ ನಲ್ಲಿ ಎಲ್ಲಾ ಮಾಹಿತಿಯನ್ನು ನೀಡಲಾಗಿದ್ದು, ಭೇಟಿ ನೀಡಿ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕು ಎಂದು ಶಿಕ್ಷಣ ಪಡೆದವರು, ಬ್ಯಾಂಕ್ ಉದ್ಯೋಗಕ್ಕೆ ಕಾಯುತ್ತಿರುವವರಿಗೆ ಇದು ಸುವರ್ಣ ಅವಕಾಶವೇ ಸರಿ. ಇಂದೇ ಅರ್ಜಿ ಸಲ್ಲಿಕೆ ಮಾಡಿ.










