ಬೆಳಗಾವಿ: ಗೃಹಲಕ್ಷ್ಮೀ ಹಣದಿಂದ ಸಾಕಷ್ಟು ಬಡವರ ಸಂಸಾರಗಳು ಜೀವನವನ್ನು ನಡೆಸುತ್ತಿದ್ದರು. ಬರುವುದು ಎರಡೇ ಸಾವಿರ ಆದರೂ ಅದೆಷ್ಟೋ ಸಂಸಾರಗಳ ಕಷ್ಟವನ್ನು ತೀರಿಸುತ್ತಿತ್ತು. ಆದರೆ ಈಗ ಕಳೆದ ಕೆಲವು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಮಹಿಳೆಯರ ಕೈ ಸೇರಿಲ್ಲ. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಅಪಘಾತದ ಬಳಿಕ ಚೇತರಿಸಿಕೊಂಡು ಮಾಧ್ಯಮದವರ ಜೊತೆಗೆ ಮಾತನಾಡಿದ್ದು, ಭೀಕರ ಅಪಘಾತದಲ್ಲಿ ಬಹಳಷ್ಟು ತೊಂದರೆಯಾಗಿತ್ತು. ಆದರೆ ಗುರುಹಿರಿಯರ ಆಶೀರ್ವಾದ, ಭಗವಂತನ ಆಶೀರ್ವಾದ, ತಂದೆ ತಾಯಿಯ ಆಶೀರ್ವಾದದಿಂದ ಇವತ್ತು ಮತ್ತೆ ಹೊರಗೆ ಬಂದಿದ್ದೇನೆ. ಎರಡು ವಾರ ವಿಶ್ರಾಂತಿ ಸೂಚಿಸಿದ್ದಾರೆ. ಟ್ರಾವೆಲ್ ಮಾಡೋದು ಬೇಡ ಎಂದಿದ್ದಾರೆ. ನಾನು ಯಾವತ್ತಿದ್ದರು ಜನರ ಮಧ್ಯದಲ್ಲಿ ಇದ್ದವಳು. ಅದರಲ್ಲೂ ನನ್ನ ಕ್ಷೇತ್ರದ ಜನ ಅಂದ್ರೆ ಅವರ ಮನೆ ಮಗಳ ಥರ ಅವರ ಸೇವೆ ಮಾಡ್ತಾ ಇದ್ದೆ. 25 ವರ್ಷದ ರಾಜಕೀಯ ಜೀವನದಲ್ಲಿ ಈ ಒಂದು ತಿಂಗಳು ಬಹಳ ಕಷ್ಟಕರವಾಗಿತ್ತು. ಆದರೂ ಫೋನ್ ಮೂಲಕ ಸಂಪರ್ಕದಲ್ಲಿದ್ದೆ ಎಂದಿದ್ದಾರೆ.

ಇದೇ ವೇಳೆ ಗೃಹಲಕ್ಷ್ಮೀ ಹಣದ ಬಗ್ಗೆ ಮಾತನಾಡಿ, ಗೃಹಲಕ್ಷ್ಮೀ ತಾಲೂಕು ಪಂಚಾಯತ್ ಮುಖಾಂತರ ಹಾಕುವುದರಿಂದ ಸ್ವಲ್ಪ ತಡವಾಗಿದೆ. ಈಗಾಗಲೇ ನಾಲ್ಕು ತಾಲೂಕು ಪಂಚಾಯತ್ ನಲ್ಲಿ ಹಾಕಿ, ಆಮೇಲೆ ನಮ್ಮ ಇಲಾಖೆಗೆ ದುಡ್ಡು ಬರುತ್ತೆ. ಡಿಡಿ ಮೂಲಕ ಹಣ ಸಂದಾಯವಾಗುತ್ತೆ. ಅದಕ್ಕೆ ತಡವಾಗುತ್ತಿದೆ. ನಮ್ಮ ಇಲಾಖೆಗೆ ದುಡ್ಡು ಬಂದು ಹದಿನೈದು ದಿನ ಆಯ್ತು. ತಾಲೂಕು ಪಂಚಾಯ್ತಿಯಿಂದ ಬರುವುದು ತಡವಾಗಿದೆ. ಹೊಸದಾಗಿರೋ ಕಾರಣ.ಮ ಮುಂದಿನ ತಿಂಗಳಿಗೆ ಇದೆಲ್ಲ ಸರಿಯಾಗುತ್ತೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








