ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಡೆಹಿಡಿದ ಹೈಕಮಾಂಡ್: ಸುಧಾಕರ್ ಗೆ ಸವಾಲು ಹಾಕಿದ ಸಂದೀಪ್ ರೆಡ್ಡಿ

suddionenews
1 Min Read

ಚಿಕ್ಕಬಳ್ಳಾಪುರ: ಬಿಜೆಪಿ ಎಲ್ಲಾ ಜಿಲ್ಲೆಗಳಿಗೂ ಜಿಲ್ಲಾಧ್ಯಕ್ಷರನ್ನ ನೇಮಕ ಮಾಡಿದೆ. ಚಿಕ್ಕಬಳ್ಳಾಪುರಕ್ಕೂ ಸಂದೀಪ್ ರೆಡ್ಡಿಯನ್ನು ನೇಮಕ ಮಾಡುವುದರಲ್ಲಿತ್ತು. ಆದರೆ ಡಾ.ಕೆ.ಸುಧಾಕರ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಹೈಕಮಾಂಡ್ ತಡೆಹಿಡಿದಿದೆ. ಈ ಸಂಬಂಧ ಇದೀಗ ಸಂದೀಪ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಸವಾಲು ಹಾಕಿದ್ದಾರೆ.

ಸಂಸದರಾದ ಸುಧಾಕರ್ ಅವರು ನನ್ನ ವಿರುದ್ಧ ಪರ್ಸನಲ್ ಆಗಿ ಏನೇನು ಟಾರ್ಗೆಟ್ ಮಾಡ್ತಾ ಇದ್ರು ಎಂಬುದನ್ನು ಕಳೆದ ಹತ್ತನ್ನೆರಡು ವರ್ಷದಿಂದ ಜೀರ್ಣ ಮಾಡ್ಕೊಂಡೆ ಬಂದೆ. ಇವತ್ತು ಇದಕ್ಕೊಂದು ಫುಲ್ ಸ್ಟಾಪ್ ಇಡಬೇಕು, ನನ್ನ ಕಾರ್ಯಾಚರಣೆಯನ್ನು ಬೇರೆ ಮಾಡಿಕೊಳ್ಳಬೇಕು ಅಂತ ಮನಸ್ಸಲ್ಲಿ ನಿರ್ಧಾರ ಮಾಡಿದ್ದೀನಿ, ಅದರಂತೆ ನಡೆಯುತ್ತೀನಿ. 2007ರಲ್ಲಿ ನಾನು ಮತ್ತು ಸುಧಾಕರ್ ಅವರು ಕಾಂಗ್ರೆಸ್ ನಲ್ಲಿದ್ವಿ. ಇದೇ ಸುಧಾಕರ್ ಅವರು 2007-08ರಲ್ಲಿ ಕೆಪಿಸಿಸಿಗೆ ಸೆಕ್ರೆಟರಿ ಆಗಿದ್ದರು. ಆ ಸಮಯದಲ್ಲಿ ಪಕ್ಷದ ಟಿಕೆಟ್ ಗೋಸ್ಕರ ಕಷ್ಟಪಟ್ಟಿದ್ದು ನಿಜ. ನಮ್ಮ ತಾಯಿಗೆ ಅಂದು ಜಿಲ್ಲಾ ಪಂಚಾಯತ್ ಗೆ ಟಿಕೆಟ್ ತೆಗೆದುಕೊಂಡು ಬಂದೆ. ನಮ್ಮ ತಾಯಿ ಇಂದಿಗೂ ಆತನನ್ನ ಮಗ ಅಂತಾರೆ. ಆದ್ರೆ ಈ ಮನುಷ್ಯ ತನ್ನ ತಾಯಿಯನ್ನೇ ಸೋಲಿಸಬೇಕು ಅಂತೇಳಿ ಅಂದಿನಿಂದ ರೆಬೆಲ್ ಆದ್ರು.

ಆದ್ರೂ ನಾವೂ ಅವರನ್ನ ಬಿಟ್ವಾ..? 2013ರಲ್ಲಿ ನಾನು ನಿಮ್ಮ ಪರ ಕೆಲಸ ಮಾಡದೆ ಇರಬಹುದು. ಆದರೆ ತೊಂದರೆಯಂತು ಕೊಟ್ಟಿಲ್ಲ. 2019ಕ್ಕೆ ತಾವೂ ನಮ್ಮ ಪಕ್ಷಕ್ಕೆ ಬಂದ್ರಿ (ಬಿಜೆಪಿ). ಆಗ ನೀವೂ ನನಗೆ ಕಳಿಸಿರುವ ಮೆಸೇಜಸ್, ನಾನು ನೀವೂ ಮಾಡಿರುವಂಥ ಕೆಲಸ, ನನ್ನ ತನು, ಮನ, ಧನವನ್ನೆಲ್ಲ ಅರ್ಪಿಸಿಕೊಂಡಿದ್ದೀನಿ. ನನ್ನನ್ನ ನಮ್ಮ ಹೋಬಳಿಗೆ ಇನ್ಚಾರ್ಜ್ ಮಾಡಿ ಹಾಕುದ್ರು. ಆದರೆ ನಾನು ಆ ಸಮಯದಲ್ಲಿ ನಾನು ಹೆಚ್ಚಿನ ಕೆಲಸ ಮಾಡಿದ್ದೀನಿ. 2024ರಲ್ಲಿ ನೀವೂ ಲೋಕಸಭಾ ಚುನಾವಣೆಯಲ್ಲಿ ನೀವೂ ಟಿಕೆಟ್ ಕೇಳಿದ್ರಿ, ನಾವೂ ವಿಶ್ವಣ್ಣನ ಮಗನಿಗೆ ಟಿಕೆಟ್ ಗಾಗಿ ಪ್ರಯತ್ನ ಪಟ್ಟಿದ್ದು ನಿಜ. ಅದನ್ನ ತಪ್ಪು ಅಂತ ಹೇಗೆ ಹೇಳಿದ್ರಿ. ಆಯ್ತು ಟಿಕೆಟ್ ನಿಮಗೆ ಸಿಕ್ಕ ಮೇಲೆ ನಿಮಗೋಸ್ಕರ ಕೆಲಸ ಮಾಡಿದ್ದೀನೋ ಇಲ್ವೋ ಅನ್ನೋದನ್ನ ಆಣೆ ಮಾಡಿ ಹೇಳಿ ಎಂದು ಸವಾಲು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *