ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಶಾರದಮ್ಮ ಆರ್.ಎಸ್.ರುದ್ರಪ್ಪ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಇದೇ ಫೆಬ್ರವರಿ 12ರಂದು ಬಾರತ ಹುಣ್ಣಿಮೆ ಅಂಗವಾಗಿ 78ನೇ ವರ್ಷದ ಶ್ರೀ ರೇಣುಕಾಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
![](https://suddione.com/content/uploads/2024/10/gifmaker_me-5-1.gif)
ಫೆಬ್ರವರಿ 12ರಂದು ಬುಧವಾರ ಶ್ರೀ ರೇಣುಕಾಯಲ್ಲಮ್ಮ ದೇವಿಗೆ (ಜಡೇಯಲ್ಲಮ್ಮ) ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪ ಅಲಂಕಾರದೊಂದಿಗೆ ವಿಶೇಷ ದರ್ಶನ ಇರಲಿದೆ. ಅಂದು ಶ್ರೀದೇವಿಗೆ ಮಡ್ಲಕ್ಕಿ ಮತ್ತು ಪಡ್ಡಲಿಗೆ ತುಂಬಿಸಿಕೊಳ್ಳಲು ಏರ್ಪಡಿಸಿದೆ.
ಅಂದು ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ಪೂಜೆ ನಡೆಯಲಿದೆ. ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೀರ್ಥ, ಪ್ರಸಾದ ಸ್ವೀಕರಿಸಿ, ಶ್ರೀದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ರೇಣುಕಾಯಲ್ಲಮ್ಮ ದೇವಸ್ಥಾನದ ಮುಖ್ಯಾಧಿಕಾರಿ ಎಲ್.ತುಕಾರಾಮ ಚವ್ಹಾಣ್ ತಿಳಿಸಿದ್ದಾರೆ.
![](https://suddione.com/content/uploads/2025/02/site.webp)