ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನೂರೆಂಟು ಗೊಂದಲ, ನೂರೆಂಟು ಚರ್ಚೆಗಳು. ಅದರಲ್ಲಿ ಬಹಳ ಮುಖ್ಯವಾಗಿ ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ. ದಲಿತ ಸಿಎಂ ವಿಚಾರ ಆಗಾಗ ಚರ್ಚೆಗೆ ಬಂದು ತಣ್ಣಗಾಗುವುದು ಸಾಮಾನ್ಯ ಬಿಡು. ಆದರೆ ಈ ಬಾರಿ ಕಾಂಗ್ರೆಸ್ ನಲ್ಲಿ ದಲಿತರ ಡಿನ್ನರ್ ಮೀಟಿಂಗ್ ಕೂಡ ಚರ್ಚೆಗೆ ಬಂದಿತ್ತು. ಅದನ್ನ ಹೈಕಮಾಂಡ್ ಸೂಚನೆ ಮೇರೆಗೆ ರದ್ದು ಮಾಡಲಾಗಿತ್ತು. ಈ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಇದು ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅದಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಉತ್ತರ ನೀಡಿದ್ದಾರೆ.
![](https://suddione.com/content/uploads/2024/10/gifmaker_me-5-1.gif)
ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಹಾಗೂ ನಮ್ಮ ಕುಟುಂಬ ಒಂದೇ. ರಾಜಕೀಯವನ್ನು ಹೊರತುಪಡಿಸಿದರೆ ಅವರು ನನಗೆ ಹಿರಿಯ ಅಣ್ಣನಿದ್ದಂತೆ. ನಾನು ಆಗಾಗ್ಗೆ ಅವರನ್ಬು ಭೇಟಿ ಮಾಡುತ್ತಾ ಇರುತ್ತೇನೆ. ಭೇಟಿ ವೇಳೆ ಕುಟುಂಬ ವಿಚಾರಗಳನ್ನು ಮಾತನಾಡುತ್ತೇವೆ. ಭೇಟಿಯಾದಾಗೆಲ್ಲ ರಾಜಕೀಯದ ವಿಚಾರಗಳನ್ನೇ ಮಾತನಾಡುವುದಕ್ಕೆ ಹೋಗುವುದಿಲ್ಲ. ನಿನ್ನೆ ಕೂಡ ಯಾವುದೇ ರೀತಿಯ ರಾಜಕೀಯ ವಿಚಾರಗಳನ್ನು ಮಾತನಾಡಿಲ್ಲ. ಬದಲಿಗೆ ಕುಟುಂಬದ ವಿಚಾರಗಳನ್ನೇ ಮಾತನಾಡಿದ್ದೇನೆ.
ಒಂದೇ ಒಂದು ಪದವೂ ರಾಜಕೀಯದ ಬಗ್ಗೆ ಇರಲಿಲ್ಲ. ಅದಕ್ಕೆ ವಿಶೇಷವಾದ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ದೆಹಲಿಗೆ ಹೋಗುತ್ತೇನೆ. ನಮ್ಮ ನಾಯಕರನ್ನು ಆಗಾಗ ಭೇಟಿಯಾಗಿ ಬರುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವೇನಿದೆ. ಒಂದು ವೇಳೆ ಚರ್ಚೆ ಮಾಡಿದ್ದರೆ ಏನು ಮಾಡಿದ್ದೇನೆ ಎಂಬುದರ ಬಗ್ಗೆ ನಿಮ್ಮ ಮುಂದೆ ಹೇಳುತ್ತಿದ್ದೆ ಎಂದಿದ್ದಾರೆ.
![](https://suddione.com/content/uploads/2025/02/site.webp)