ಮೈಸೂರು: ಚುನಾವಣೆ ಬಂದ ಬಳಿಕ ಎಲ್ಲಾ ಪಕ್ಷಗಳು ತಮ್ಮ ತಮ್ಮ ಬತ್ತಳಿಕೆಯಿಂದ ಹೊಸ ಬಾಣವನ್ನ ಬಿಡ್ತಾರೆ. ಹೊಸ ಪ್ರಣಾಳಿಕೆ ಬಿಡುಗಡೆ ಮಾಡಿ, ಗೆದ್ದ ಬಳಿಕ ಆ ಪ್ರಣಾಳಿಕೆಯಲ್ಲಿನ ಅಷ್ಟು ಯೋಜನೆಗಳನ್ನ ಜಾರಿಗೆ ತರುವಲ್ಲಿ ವಿಫಲರಾಗ್ತಾರೆ. ಆದ್ರೆ ಇದೀಗ ಕುಮಾರಸ್ವಾಮಿ ಆ ಬಗ್ಗೆ ವೆರಿ ಕಾನ್ಫಿಡೆಂಟ್ ಆಗಿ ಉತ್ತರಿಸಿದ್ದಾರೆ.
ಸದ್ಯ ಪರಿಷತ್ ಚುನಾವಣೆ ನಡೀತಾ ಇದೆ. ಮೈಸೂರಿ ಜಿಲ್ಲೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಂಜೇಗೌಡ ಸ್ಪರ್ಧಿಸಿದ್ದಾರೆ. ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕುಮಾರಸ್ವಾಮಿ, ಈ ವೇಳೆ 2023ರ ವಿಧಾನಸಭೆ ಚುನಾವಣೆ ಬಗ್ಗೆಯೂ ಮಾತನಾಡಿದ್ದಾರೆ.
ಪಂಚರತ್ನ ಯೊಇಜನೆಗಳನ್ನ ಇಟ್ಟುಕೊಂಡು ಮುಂದಿನ ಚುನಾವಣೆಯನ್ನ ಎದುರಿಸಲು ಸಿದ್ದರಿದ್ದೇವೆ. 2023ಕ್ಕೆ ಜೆಡಿಎಸ್ ಗೆ ಸಂಪೂರ್ಣ ಮತ ನೀಡಿ. ಘೋಷಿಸಿದ ಯೋಜನೆಗಳನ್ನ ಖಂಡಿತವಾಗಿಯೂ ಜಾರಿಗೆ ತರುತ್ತೇವೆ. ರೈತರು, ಬಡವರು, ಮಹಿಳೆಯರಿಗೆ ಅನೇಕ ಯೋಜನೆಗಳನ್ನ ಹಾಕಿದ್ದೇನೆ. ಕರ್ನಾಟಕ ಅಭಿವೃದ್ಧಿಗೆ ಈ ಪಂಚರತ್ನ ಯೋಜನೆಯ ಮೂಲಕ ಫ್ಲ್ಯಾನ್ ಮಾಡಿದ್ದೇನೆ. ನೀವೆಲ್ಲಾ ಬಹುಮತ ನೀಡಿ. ಒಂದು ವೇಳೆ ಘೋಷಿಸಿದ ಯೋಜನೆಯನ್ನ ಜಾರಿ ಮಾಡದೆ ಹೋದಲ್ಲಿ ಜೆಡಿಎಸ್ ಬಾಗಿಲು ಹಾಕುತ್ತೇವೆ ಎಂದಿದ್ದಾರೆ.