ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮೆಟ್ರೋ ನೆಮ್ಮದಿಯ ಪ್ರಯಾಣ ಅಂತಾನೇ ಹೇಳಬಹುದು. ದೂರಕ್ಕೆ ಹೋಗುವವರಿಗೆ ಟ್ರಾಫಿಕ್ ಸಮಸ್ಯೆಯ ಅನ್ನೋದು ಭೂತವಾಗಿ ಕಾಡುತ್ತದೆ. ಗಂಟೆಗಟ್ಟಲೇ ಟ್ರಾಫಿಕ್ ನಲ್ಲಿಯೇ ಸಿಲುಕಬೇಕಾಗುತ್ತದೆ. ಆದರೆ ಈ ಟ್ರಾಫಿಕ್ ಸಮಸ್ಯೆಯಿಂದ ಕೊಂಚ ನೆಮ್ಮದಿ ಕೊಡಿಸಿದ್ದು ಮಾತ್ರ ನಮ್ಮ ಮೆಟ್ರೋ. ಪ್ರತಿದಿನ ಸಾವಿರಾರು ಮಂದಿ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ. ಇದೀಗ ಮೆಟ್ರೋ ಪ್ರಯಾಣ ದರವನ್ನು ಏರಿಸಿ, ಪ್ರತಿದಿನ ಓಡಾಡುವವರಿಗೆ ಶಾಕ್ ನೀಡಿದೆ ಬಿಎಂಆರ್ಸಿಎಲ್.
![](https://suddione.com/content/uploads/2024/10/gifmaker_me-5-1.gif)
ಇಂದಿನ ದರ ನಾಳೆ ಬದಲಾಗಲಿದೆ. ನಾಳೆ ಅಂದ್ರೆ ಫೆಬ್ರವರಿ 9 ರಿಂದ ದರ ಬದಲಾಗಲಿದೆ. ಹಾಗಾದ್ರೆ ದರ ನಾಳೆಗೆ ಎಷ್ಟು ಏರಿಕೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಕಿಲೋ ಮೀಟರ್ ಮೇಲೆ ದರ ಏರಿಕೆಯಾಗಿದೆ.
0-2 ಕಿಮೀಟರ್ ವರೆಗೆ ಸದ್ಯಕ್ಕೆ 10 ರೂಪಾಯಿ ಇದೆ. ಅದರ ದರ ಯಾವುದೇ ಏರಿಕೆಯಾಗಿಲ್ಲ. 2 ಕಿಲೋ ಮೀಟರ್ ವರೆಗೆ ಅದೇ ದರ ಇದೆ. ಉಳಿದಂತೆ 2-4 ಕಿ.ಮೀಗೆ 5 ರೂಪಾಯಿ ಹೆಚ್ಚಳವಾಗಿದೆ. 4-6 ಕಿ.ಮೀ 10 ರೂಪಾಯಿ ಏರಿಕೆಯಾಗಿದೆ. 6-8 ಕಿಮೀಗೆ 12 ರೂಪಾಯಿ, 8-10 ಕಿಮೀಗೆ 15 ರೂಪಾಯಿ, 10-15 ಕಿಮೀಗೆ 20 ರೂಪಾಯಿ, 15-20 ಕಿಮೀಗೆ 20 ರೂಪಾಯಿ, 20-25 ಕಿಮೀಗೆ 20 ರೂಪಾಯಿ, 25-30 ಕಿಮೀಗೆ 90 ರೂಪಾಯಿ ಹೆಚ್ಚಳವಾಗಿದೆ. ನಾಳೆಯಿಂದಾನೆ ಪರಿಷ್ಕೃತ ದರ ಜಾರಿಯಾಗಲಿದೆ. ಇನ್ನು ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಟಿಕೆಟ್ ದರದ ಮೇಲೆ ಶೇಕಡ 6ರಷ್ಟು ರಿಯಾಯಿತಿ ಸಿಗಲಿದೆ.
![](https://suddione.com/content/uploads/2025/02/site.webp)