ಫೆಬ್ರವರಿ 16 ಹತ್ತಿರವಾಗುತ್ತಿದೆ. ಅಂದು ದರ್ಶನ್ ಅಭಿಮಾನಿಗಳಿಗೆ ವಿಶೇಷದಲ್ಲಿ ವಿಶೇಷವಾದ ದಿನವಾಗಿದೆ. ತಮ್ಮ ಬಾಸ್ ಬರ್ತ್ ಡೇ ಸೆಲೆಬ್ರೇಷನ್ ಮೂಡಲ್ಲಿದ್ದಾರೆ. ಪ್ರತಿ ವರ್ಷ ಕೂಡ ದರ್ಶನ್ ಅಭಿಮಾನಿಗಳನ್ನ ಭೇಟಿ ಮಾಡ್ತಾ ಇದ್ದರು. ಮಧ್ಯರಾತ್ರಿಯವರೆಗೂ ನಿಂತುಕೊಂಡೆ ಧನ್ಯವಾದ ಹೇಳ್ತಾ ಇದ್ದರು. ಕೈ ಕುಲುಕುತ್ತಿದ್ದರು. ಈ ಹುಟ್ಟುಹಬ್ಬಕ್ಕೂ ಮುನ್ನ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಹೀಗಾಗಿ ಈ ಬಾರಿಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೋ ಹೇಗೋ ಎಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಇದೀಗ ಅದಕ್ಕೊಂದು ಸ್ಪಷ್ಟನೆ ಕೊಟ್ಟಿದ್ದಾರೆ.
![](https://suddione.com/content/uploads/2024/10/gifmaker_me-5-1.gif)
ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಮೊದಲಿಗೆ ಈ ಬಾರಿ ತಮ್ಮ ಹುಟ್ಟುಹಬ್ಬದ ದಿನ ಯಾರಿಗು ಸಿಗುವುದಿಲ್ಲ ಎಂಬ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಅವರಿಗೆ ಬೆನ್ನು ನೋವು ವಿಪರೀತವಾಗಿರುವುದು ಗೊತ್ತೆ ಇದೆ. ಹೀಗಾಗಿ ಸೆಲೆಬ್ರೆಟಿಗಳಿಗೆ ಕ್ಷಮೆ ಕೇಳಿದ ದರ್ಶನ್, ನನಗೆ ಸಮಸ್ಯೆ ಇರುವ ಬಗ್ಗೆ ನಿಮಗೆಲ್ಲ ಗೊತ್ತೆ ಇದೆ. ಹೆಚ್ಚು ಹೊತ್ತು ನಿಲ್ಲುವುದಕ್ಕೆ ಆಗಲ್ಲ. ಹಾಗೇ ಇಂಜೆಕ್ಷನ್ ತೆಗೆದುಕೊಂಡಾಗ ಮಾತ್ರ ಚೆನ್ನಾಗಿರುತ್ತೀನಿ. ಪವರ್ ಇಳಿದ ಮೇಲೆ ಮತ್ತೆ ನೋವು ಶುರುವಾಗುತ್ತೆ. ಈ ವರ್ಷ ನಿಮ್ಮಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ. ಕ್ಷಮಿಸಿ ಎಂದು ಹೇಳಿದ್ದಾರೆ.
ಇದೇ ವಿಡಿಯೋದಲ್ಲಿ ಸದಾ ಜೊತೆಗೆ ನಿಂತ ಧನ್ವೀರ್ ಗೆ, ಬುಲ್ ಬುಲ್ ರಚಿತಾ ರಾಮ್ ಗೆ, ಪ್ರಾಣ ಸ್ನೇಹಿತೆ ರಕ್ಷಿತಾಗೆ ಥ್ಯಾಂಕ್ಸ್ ಹೇಳಿದ್ದಾರೆ. ಹಾಗೇ ಸೂರಪ್ಪ ಬಾಬು ಅವರಿಗೆ ಹಣ ವಾಪಾಸ್ ಕೊಟ್ಟಿರುವುದು ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಆ ಬಗ್ಗೆಯೂ ಕ್ಲಾರಿಟಿ ಕೊಟ್ಟಿದ್ದು, ಸೂರಪ್ಪ ಬಾಬು ಅವರಿಗೆ ಸಾಕಷ್ಟು ಕಮಿಟ್ಮೆಂಟ್ಸ್ ಇದೆ. ಅವರ ಬಳಿ ಹಣ ತೆಗೆದುಕೊಂಡು ಬಹಳ ದಿನ ಆಗೋಗಿದೆ. ಇನ್ನಷ್ಟು ಸಮಸ್ಯೆ ಆಗೋದು ಬೇಡ ಅಂತಷ್ಟೇ ಹಣ ಕೊಟ್ಟಿದ್ದು. ಮತ್ತೆ ಒಂದೊಳ್ಳೆ ಕಥೆ ತನ್ನಿ ಮಾಡೋಣಾ ಅಂತ ಹೇಳಿದ್ದೀನಿ. ಹಾಗೇ ಪ್ರೇಮ್ ಜೊತೆಗೆ ಒಂದು ಸಿನಿಮಾ ಮಾಡಿಯೇ ಮಾಡ್ತೀನಿ. ಅದು ರಕ್ಷಿತಾ ಡ್ರೀಮ್ ಎಂದಿದ್ದಾರೆ. ಇನ್ನು ಬೇರೆ ಭಾಷೆಗೆ ಹೋಗ್ತಾರಾ ದರ್ಶನ್ ಎಂಬ ಪ್ರಶ್ನೆಗೆ, ಕನ್ನಡ ಬಿಟ್ಟು ಎಲ್ಲೂ ಹೋಗಲ್ಲ ಎಂದಿರುವ ದಾಸ, ಕಾವೇರಿ ನದಿಯನ್ನ ಉದಾಹರಣೆಯಾಗಿ ನೀಡಿದ್ದಾರೆ.
![](https://suddione.com/content/uploads/2025/02/site.webp)