ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ರಾಜ್ಯ ಬಜೆಟ್ ನತ್ತ ಜನರ ಚಿತ್ತ ನೆಟ್ಟಿದೆ. ರಾಜ್ಯ ಬಜೆಟ್ ನಲ್ಲಿ ಇನ್ನಷ್ಟು ನಿರೀಕ್ಷೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ರೈತ ವರ್ಗಕ್ಕೆ ನಿರೀಕ್ಷೆಗಳು ಇದ್ದೇ ಇರುತ್ತದೆ. ಈಗಾಗಲೇ ಐದು ಗ್ಯಾರಂಟಿಗಳನ್ನ ನೀಡಿ, ಬಡವರು, ಮಧ್ಯಮ ವರ್ಗದವರು, ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿದೆ. ಇದೀಗ ರಾಜ್ಯ ಬಜೆಟ್ ಮಂಡನೆಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
![](https://suddione.com/content/uploads/2024/10/gifmaker_me-5-1.gif)
ಇಂದು ಹಿರಿಯ ನಟಿ ಹಾಗೂ ರಾಜಕಾರಣಿ ಜಯಮಾಲಾ ಅವರ ಮಗಳು ಸೌಂದರ್ಯಾ ಅವರ ಮದುವೆ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಮದುವೆಗೆ ಕನ್ನಡ ಇಂಡಸ್ಟ್ರಿಯ ಸೆಲೆಬ್ರೆಟಿಗಳೆಲ್ಲಾ ಭಾಗಿಯಾಗಿ ವಧು ವರರಿಗೆ ಆಶೀರ್ವಾದ ಮಾಡಿದ್ದಾರೆ. ಇದರ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರ ಜೊತೆಗೆ ಜಯಮಾಲಾ ಮಗಳ ಮದುವೆಗೆ ಹಾಜರಾಗಿದ್ದರು. ನವ ದಂಪತಿಗೆ ಆಶೀರ್ವದಿಸಿದರು. ಬಳಿಕ ತಕ್ಷಣ ಅಲ್ಲಿಂದ ನೇರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಅನಾರೋಗ್ಯದ ಸಮಸ್ಯೆಯಿಂದ ಎಲ್ಲಿಯೂ ಹೋಗದೆ ಎರಡು ದಿನಗಳಿಂದ ಮನೆಯಲ್ಕಿಯೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಇಂದು ಕೊಂಚ ಆರಾಮವಾಗಿದ್ದು, ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸುತ್ತಿದ್ದಾರೆ. ಬಜೆಟ್ 2025ಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಖಾತೆಗಳ ಸಚಿವರೊಂದಿಗೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ಹೀಗಾಗಿ ಜಲ ಸಂಪನ್ನೂಲ ಸಚಿವರು ಆಗಿರುವ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಸಭೆಗೆ ಹಾಜರಾಗಿದ್ದಾರೆ. ತಮ್ಮ ಖಾತೆಯ ಪ್ರಸ್ತಾವನೆಗಳನ್ನು ಸಲ್ಲಿಸಲು ಹೋಗಿದ್ದಾರೆ.
![](https://suddione.com/content/uploads/2025/01/studio-11.webp)