ಟಾಲಿವುಡ್ ಕ್ಯೂಟ್ ಕಪಲ್ ಲೀಸ್ಟ್ ನಲ್ಲಿ ಸಮಂತಾ ಮತ್ತು ನಾಗಚೈತನ್ಯ ಕೂಡ ನಿಂತಿದ್ರು. ಅವರಿಬ್ಬರು ಮದುವೆಯಾದಾಗ ಫ್ಯಾನ್ಸ್ ಅದೆಷ್ಟು ಖುಷಿ ಪಟ್ಟಿದ್ರೋ ಅವರಿಬ್ಬರು ಡಿವೋರ್ಸ್ ಪಡೆದು ದೂರಾದಾಗ ಅಷ್ಟೇ ಸಂಕಟ ಪಟ್ಟಿದ್ರು. ಎಲ್ಲಾ ಮರೆತು ಒಂದಾಗಿ ಅಂತ ಬೇಡಿಕೊಂಡಿದ್ರು. ಆದ್ರೆ ಈ ವಿಚಾರವಾಗಿ ಅವರಿಬ್ಬರು ನಿರ್ಧಾರ ಮಾಡಿ ಆಗಿತ್ತು. ಹೀಗಾಗಿ ದಂಪತಿ ವಿಚ್ಛೇದನ ಪಡೆದಿದ್ದಾರೆ.
ಆದ್ರೆ ವಿಚ್ಛೇದನದ ಬಳಿಕ ಟ್ರೋಲಿಗರಿಗೆ ಗುರಿಯಾಗಿದ್ದು ಮಾತ್ರ ನಟಿ ಸಮಂತಾ. ಹೌದು ಟ್ರೋಲ್ ಪೇಜ್ ಗಳೆಲ್ಲಾ ಸಮಂತಾ ಅವರದ್ದೇ ತಪ್ಪೇನೋ ಎಂಬಂತೆ ಬಿಂಬಿಸಿದ್ದವು. ಜೀವನಾಂಶ, ತಾಯಿಯಾಗುವ ಬಗ್ಗೆ ಹೀಗೆ ಅನೇಕ ವೈಯಕ್ತಿಕ ವಿಚಾರಗಳನ್ನೇ ತೆಗೆದು ಟ್ರೋಲ್ ಮಾಡುತ್ತಿದ್ದರು. ಟ್ರೋಲ್ ನವರಿಗೆ ತಲೆ ಕೆಡಿಸಿಕೊಂಡ್ರೆ ಇನ್ನು ಜಾಸ್ತಿ ಮಾಡ್ತಾರೆ ಅಂತ ಒಂದಷ್ಟು ಜನ ಸಲಹೆ ಕೊಟ್ಟಿದ್ರಿಂದ ಸುಮ್ಮನಾಗಿದ್ದರಂತೆ.
ಕಡೆಗೂ ಟ್ರೋಲಿಗರ ಬಗ್ಗೆ ಮಾತನಾಡಿರುವ ಸಮಂತಾ, ನನಗೂ ಮನಸ್ಸಿದೆ, ನೋವಾಗುತ್ತೆ. ಈ ರೀತಿ ಟ್ರೋಲ್ ಗಳನ್ನ ಮಾಡಬೇಡಿ. ನಾನು ನಿಮ್ಮ ಟ್ರೋಲ್ ಗಳನ್ನ ಎಂಜಾಯ್ ಮಾಡುತ್ತೇನೆ. ಆದ್ರೆ ಈ ರೀತಿ ವೈಯಕ್ತಿಕವಾಗಿ ಟ್ರೋಲ್ ಮಾಡಿದ್ರೆ ನನಗೂ ನೋವಾಗುತ್ತೆ ಎಂದಿದ್ದಾರೆ.