ಚಿತ್ರದುರ್ಗ. ಫೆ.06: ಎಲ್ಲರೂ ಕೈಜೋಡಿಸಿ ಟಿಬಿ ಮುಕ್ತ ಸಮಾಜ ನಿರ್ಮಾಣ ಮಾಡೋಣ ಎಂದು ಕಾಸವರಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಕಾವ್ಯ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಕಾಸವರಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ದಂಡಿನ ಕುರುಬರಹಟ್ಟಿ ಗೇಟ್ ಬಳಿ ಇರುವ ಸಿಟಿ ಫೂಟ್ ವೇರ್ ಕಂಪನಿಯ ಆವರಣದಲ್ಲಿ 100 ದಿನಗಳ ಕ್ಷಯ ರೋಗ ನಿರ್ಮೂಲನ ತೀವ್ರ ಪ್ರಚಾರಾದೋಂಲನದಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟಿಬಿ ರೋಗವು ಒಂದು ಸಾಂಕ್ರಾಮಿಕ ರೋಗ. ಬ್ಯಾಕ್ಟೀರಿಯಾ ಸೋಂಕಿನಿಂದ ಹರಡುವ ಕಾಯಿಲೆಯಾಗಿದೆ. ರೋಗಿಯು ಕೆಮ್ಮಿದಾಗ, ಸೀನಿದಾಗ ಆತನಿಂದ ಉತ್ಪತ್ತಿಯಾದ ತುಂತುರು ಹನಿಗಳು ವಾತಾವರಣಕ್ಕೆ ಸೇರುತ್ತª. ಆ ಉಸಿರನ್ನು ಆರೋಗ್ಯವಂತನು ಸೇವಿಸಿದಾಗ ಆತನಿಗೆ ಟಿಬಿ ರೋಗವು ಬರುವ ಸಂಭವವಿರುತ್ತದೆ ಎಂದರು.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ ಅಡಿಯಲ್ಲಿ ನೂರು ದಿನಗಳ ತೀವ್ರ ಪ್ರಚಾರ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಟಿಬಿ ರೋಗ ಪತ್ತೆ ಹಚ್ಚುವುದು ಚಿಕಿತ್ಸೆ ನೀಡುವುದು ಪ್ರಮುಖವಾಗಿರುತ್ತದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಒಬ್ಬ ಕ್ಷಯ ರೋಗಿಯು 14 ಆರೋಗ್ಯವಂತ ಜನರಿಗೆ ಟಿಬಿ ರೋಗ ಅಂಟಿಸಬಹುದಾಗಿದೆ. ಹಾಗಾಗಿ ಸಮುದಾಯದಲ್ಲಿ ರೋಗವನ್ನು ಶೀಘ್ರ ಪತ್ತೆ ಮತ್ತು ತ್ವರಿತ ಚಿಕಿತ್ಸೆಗೆ ಒಳಪಡಿಸುವುದು ಪ್ರಮುಖವಾಗಿರುತ್ತದೆ. ಭಾರತದಲ್ಲಿ ಟಿಬಿ ರೋಗವು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ ಕೆಮ್ಮುವಾಗ ಸೀನುವಾಗ ಕರವಸ್ತ್ರ ಬಳಸುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯ ರೋಗ ವಿಭಾಗದ ಮೇಲ್ವಿಚಾರಕ ಮಹೇಂದ್ರ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತುಕಾರಾಂ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾನಮ್ಮ, ತಾಲ್ಲೂಕು ಆಶಾ ಬೋಧಕಿ ತಬಿತಾ, ಕಂಪನಿ ವ್ಯವಸ್ಥಾಪಕರು, 200ಕ್ಕೂ ಹೆಚ್ಚು ಕಾರ್ಮಿಕರು ಉಪಸ್ಥಿತರಿದ್ದರು.