ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 06 : ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಐಸಿಎಸ್‍ಸಿ ವಿಭಾಗದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಬಾಲ ಪ್ರತಿಭೆ, ಪ್ರತಿಭಾವಂತ ಭರತನಾಟ್ಯ ಕಲಾವಿದೆ ಶಮಾ ಭಾಗ್ವತ್ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಕೊಡಮಾಡುವ “ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ’ ನೀಡುವ ಈ ಪ್ರಶಸ್ತಿಯನ್ನು ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾದೀಶೆ ಎ.ಎಂ.ಚೈತ್ರಾ ರವರು ಪ್ರಶಸ್ತಿಪತ್ರ., ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನ ಪ್ರಧಾನ ಮಾಡಿ ಗೌರವಿಸಿದರು.
![](https://suddione.com/content/uploads/2024/10/gifmaker_me-5-1.gif)
ಈ ಪ್ರಶಸ್ತಿಯನ್ನು ಗಳಿಸುವ ಮೂಲಕ ಶಮಾ ಭಾಗ್ವತ್ ಅವರು ಜಿಲ್ಲೆಗೆ, ಹಾಗೂ ವ್ಯಾಸಂಗ ಮಾಡುತ್ತಿರುವ ಶಾಲೆಗೆ ಕೀರ್ತಿ ತಂದಿರುತ್ತಾರೆ. ಇವರಿಗೆ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರಾದ, ಶ್ರೀ.ಎಸ್.ಎಂ ಪೃಥ್ವೀಶ ಹಾಗೂ ನಿರ್ದೇಶಕರಾದ ಶ್ರೀಮತಿ ಸುನಿತಾ.ಪಿ.ಸಿ, ಐಸಿಎಸ್‍ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ, ಐಸಿಎಸ್‍ಇ ಉಪಪ್ರಾಚಾರ್ಯರಾದ ಅವಿನಾಶ್ ಬಿ, ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿ, ಅವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದ್ದಾರೆ.
![](https://suddione.com/content/uploads/2025/01/studio-11.webp)