ಜನಪರ ವೈದ್ಯರತ್ನ ಎಂದು ಖ್ಯಾತರಾಗಿದ್ದ ಶಿವಮೊಗ್ಗದ ನಾಟಿ ವೈದ್ಯ ನಿಧನ..!

suddionenews
1 Min Read

ಶಿವಮೊಗ್ಗ: ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಈ ನಾಣ್ನುಡಿಯಂತೆ ಜನರ ಪರವಾಗಿ ವೈದ್ಯಕೀಯ ಸೇವೆ ಮಾಡುವುದು ತುಂಬಾ ಕಡಿಮೆ ಜನ. ವೈದ್ಯ ವೃತ್ತಿಯಲ್ಲಿ ಜನರ ಮನಸ್ಸು ಗೆಲ್ಲುವುದು ಸುಲಭವಲ್ಲ. ಹಾಗೇ ಎಲ್ಲರ ಪಾಲಿನ ನಡಚ್ಚಿನ ವೈದ್ಯರಾಗಿದ್ದವರು ಶಿವಮೊಗ್ಗದ ನಾಟಿ ಎಂ.ಬಿ.ಶಿವಣ್ಣ ಗೌಡ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದವರು ಶಿವಣ್ಣ ಗೌಡ. ವಯೋ ಸಹಜ ಕಾಯಿಲೆಯಿಂದ ಇಂದು ಸಾವನ್ನಪ್ಪಿದ್ದಾರೆ. ಜನಪದ ವೈದ್ಯ ರತ್ನ, ನಾಟಿ ವೈದ್ಯ ಎಂದೇ ಖ್ಯಾತಿ ಪಡೆದಿದ್ದರು. ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಶಿವಮೊಗ್ಗ ಜಿಲ್ಲೆಯ ಮಂದಿ ಮರುಕ ವ್ಯಕ್ತಪಡಿಸಿದ್ದಾರೆ. ಕಂಬನಿ ಮಿಡಿದಿದ್ದಾರೆ. ಇಂಥ ವೈದ್ಯನನ್ನು ಕಳೆದುಕೊಂಡಿದ್ದಕ್ಕೆ ದುಃಖಿತರಾಗಿದ್ದಾರೆ.

ಶಿವಣ್ಣ ಗೌಡ ಅವರು, ಕಳೆದ ನಾಲ್ಕೈದು ದಿನಗಳಿಂದ ಪಾರಂಪರಿಕ ನಾಟಿ ವೈದ್ಯ ವೃತ್ತಿಯಲ್ಲಿ ಯಾವುದೇ ಪ್ರಚಾರವಿಲ್ಲದೆ ಯಶಸ್ಸನ್ನು ಕಂಡಿದ್ದರು. ಪಾರಂಪರಿಕ ನಾಟಿ ಔಷಧ ನೀಡುತ್ತಾ ಸಾವಿರಾರು ಜನರ ಬದುಕಿಗೆ ಆಶಾ ಕಿರಣರಾಗಿದ್ದರು. ಶಿವಣ್ಣ ಅವರಿಂದ ಅನೇಕ ದೊಡ್ಡ ದೊಡ್ಡ ವ್ಯಕ್ತಿಗಳು ಅನುಕೂಲ ಪಡೆದುಕೊಂಡಿದ್ದಾರೆ. ಮಾಜಿ ಸಚಿವೆ ಮನೋರಮ ಮದ್ವರಾಜ್, ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಚಂದ್ರಶೇಖರ್ ಕಂಬಾರ್, ಮಾಜಿ ಸಚಿವ ಈಶ್ವರಪ್ಪ ಹಾಗೂ ಹೊರ ರಾಜ್ಯಗಳ ಹಾಗೂ ಹೊರ ರಾಷ್ಟ್ರದ ಅನೇಕರು ಇವರಿಂದ ಔಷಧಿ ಪಡೆದಿದ್ದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ವೈದ್ಯ ಶಿವಣ್ಣ ಗೌಡ ಅವರ ಸೇವೆಯನ್ನು ಮೆಚ್ಚಿದ್ದರು.

Share This Article
Leave a Comment

Leave a Reply

Your email address will not be published. Required fields are marked *