ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 06 : ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಿನ್ನೆಲೆಯಲ್ಲಿ ಜಿಲ್ಲೆಯ ಕಾರ್ಯಕ್ರಮಗಳನ್ನು ಪರಿಗಣಿಸಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ 2025ರ 3 ಪ್ರಶಸ್ತಿಗಳು ಲಭಿಸಿವೆ.
![](https://suddione.com/content/uploads/2024/10/gifmaker_me-5-1.gif)
ಬೆಂಗಳೂರಿನ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಿನ್ನೆ (ಫೆಬ್ರವರಿ. 05) ನಡೆದ ನರೇಗಾ ಹಬ್ಬ -2025 ದಲ್ಲಿ ಅತ್ಯುತ್ತಮವಾಗಿ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಿದ ಜಿಲ್ಲೆಯ “ಸಾಮಾಜಿಕ ಅರಣ್ಯ ಇಲಾಖೆಗೆ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ”,
ಚಳ್ಳಕೆರೆ ತಾಲೂಕು, ಬೆಳಗೆರೆ ಗ್ರಾಮ ಪಂಚಾಯಿತಿಗೆ “ಅತ್ಯುತ್ತಮ ಗ್ರಾಮ ಪಂಚಾಯಿತಿ” ಮತ್ತು
ಚಿತ್ರದುರ್ಗ ತಾಲೂಕಿನ ದ್ಯಾಮವನಹಳ್ಳಿ ಗ್ರಾಮ ಪಂಚಾಯಿತಿಯ ರೇಷ್ಮೆ ಬೆಳೆಗಾರರಾದ ಶ್ರೀಮತಿ ಧನಲಕ್ಷ್ಮಿ ರವರಿಗೆ “ವಿಶೇಷ ಪ್ರಸಂಶನಾ ಪತ್ರ ವಿತರಣೆ ಪ್ರಶಸ್ತಿ” ಯನ್ನು ಸಭಾಪತಿ ಬಸವರಾಜ್ ಎಸ್ ಹೊರಟ್ಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ
ಪ್ರಿಯಾಂಕ ಖರ್ಗೆ ರವರು “ನರೇಗಾ ಹಬ್ಬ -2025″ಪ್ರಶಸ್ತಿಗಳನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್. ಜೆ ಸೋಮಶೇಖರ್, ಸಾಮಾಜಿಕ ಅರಣ್ಯ ಇಲಾಖೆಯ ಹರೀಶ್.ಕೆ ಮತ್ತು ಇಲಾಖೆಯ ಅಧಿಕಾರಿಗಳು, ಬೆಳಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ವಿಶಾಲಾಕ್ಷಿ, ಪಿ ಡಿ ಒ ದೇವೇಂದ್ರಪ್ಪ. ಸಿ.ಎಂ, ಮತ್ತು ದ್ಯಾಮವ್ವನಳ್ಳಿ ಗ್ರಾಮ ಪಂಚಾಯತಿಯ ಶ್ರೀಮತಿ ಧನಲಕ್ಷ್ಮಿ ಯವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳಾದ ಕೆ. ತಿಮ್ಮಪ್ಪ,ಜಿಲ್ಲಾ ಪಂಚಾಯತಿಯ ನರೇಗಾ ಶಾಖೆಯ ಎ ಡಿ ಪಿ ಸಿ ಮೋಹನ್ ಕುಮಾರ್ ಟಿ. ಎನ್ ಜಿಲ್ಲಾ ಐ ಇ ಸಿ ಸಂಯೋಜಕರಾದ ರವೀಂದ್ರನಾಥ್ ಎಂ. ಎಸ್, ಜಿಲ್ಲಾ ಎಂ ಐ ಎಸ್ ಸಂಯೋಜಕರಾದ ಡಿ. ಎಂ ಸಹನಾ ಹಾಗೂ ಅಕೌಂಟ್ ಮೆನೇಜರ್ ಸಿದ್ದಲಿಂಗ ತೇಜಸ್ವರವರು ಹಾಜರಿದ್ದು ಪ್ರಶಸ್ತಿಗಳನ್ನ ಸ್ವೀಕಾರ ಮಾಡಿದರು.
![](https://suddione.com/content/uploads/2025/01/studio-11.webp)