ಸರ್ಕಾರಿ ಕೆಲಸಕ್ಕೆ ಹೋಗಬೇಕೆಂದು ಅದೆಷ್ಟೋ ಜನ ಹಗಲು ರಾತ್ರಿ ಎನ್ನದೇ ಕಷ್ಟ ಪಟ್ಟು ಓದುತ್ತಾ ಇರುತ್ತಾರೆ. ಇದೀಗ ಅಂತವರಿಗಾಗಿ ಸರ್ಕಾರಿ ಕೆಲಸಗಳು ತೆರೆದುಕೊಂಡಿವೆ. ಅದರಲ್ಲೂ ಕೋರ್ಟ್ ನಲ್ಲಿ ಕೆಲಸ ಮಾಡುವವರಿಗಾಗಿ ಇಲ್ಲಿದೆ ಮಾಹಿತಿ. ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಹೊಸ ಉದ್ಯೋಗಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಿದೆ. ನ್ಯಾಯಾಲಯವು ಈ ಸಂಬಂಧ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
![](https://suddione.com/content/uploads/2024/10/gifmaker_me-5-1.gif)
ಕಿರಿಯ ನ್ಯಾಯಾಲಯ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ ಮಾಡಿದೆ. 241 ಹುದ್ದೆಗಳು ಬಾಕಿ ಇದಾವೆ. 18 ರಿಂದ 30 ವರ್ಷ ವಯಸ್ಸಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಈ ಹುದ್ದೆಗಳೊಗೆ ಅರ್ಜಿ ಸಲ್ಲಿಕೆ ಮಾಡುವವರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಜೊತೆಗೆ ಇಂಗ್ಲಿಷ್ ಟೈಪಿಂಗ್ ಸ್ಪೀಡ್ ಬರಬೇಕು. 35 ಡಬ್ಲ್ಯುಪಿಎಂ ಕಂಪ್ಯೂಟರ್ ಜ್ಞಾನ ಇರಬೇಕು. ಲಿಖಿತ ಪರೀಕ್ಷೆ, ಕಂಪ್ಯೂಟರ್ ಜ್ಞಾನ, ಟೈಪಿಂಗ್, ಡಿಸ್ಟ್ರಿಪ್ಟಿವ್ ಟೈಪ್ ಪೇಪರ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇನ್ನು ಈ ಹುದ್ದೆಗಳಿಗೆ 72,040 ರೂಪಾಯಿ ವೇತನ ಇರಲಿದೆ. ಅರ್ಜಿ ಸಲ್ಲಿಕೆಗೆ ಇಂದಿನಿಂದ ಅರ್ಜಿ ಆಹ್ವಾನ ಮಾಡಲಾಗಿದೆ. 03 ಮಾರ್ಚ್ 2025 ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಅಷ್ಟರೊಳಗೆ ಆಸಕ್ತರು ಅರ್ಜಿ ಸಲ್ಲಿಕೆ ಮಾಡಬೇಕು. ಜನರಲ್, ಓಬಿಸಿ ಕೆಟಗರಿಗೆ ಅರ್ಜಿ ಶುಲ್ಕವನ್ನು 1000 ರೂಪಾಯಿ ನಿಗದಿ ಮಾಡಲಾಗಿದೆ. ಹಾಗೇ ಎಸ್ಸಿ,ಎಸ್ಟಿ, ಮಾಜಿ ಸೈನಿಕರಿಗೆ 250 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಮಾರ್ಚ್ 3 ಒಳಗೆ ಅರ್ಜಿ ಸಲ್ಲಿಕೆ ಮಾಡಿ.
![](https://suddione.com/content/uploads/2025/01/studio-11.webp)