ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗೆ ಇಳಿಸಬೇಕೆಂದು ಯತ್ನಾಳ್ ಬಣ ಪ್ರಯತ್ನ ಪಡುತ್ತಿದೆ. ಇದರ ನಡುವೆ ಸ್ವಾಮೀಜಿಗಳನ್ನು ಪೇಮೆಂಟ್ ಸ್ವಾಮೀಜಿ ಎಂದಿದ್ದಾರೆ. ಈ ಸಂಬಂಧ ಮಾತನಾಡಿದ ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಕೆಂಡಕಾರಿದ್ದಾರೆ.
ಸ್ವಾಮಿಗಳಿಗೆ ಪೇಮೆಂಟ್ ಅಂದ್ರೆ ಇಡೀ ವೀರಶೈವ ಸಮುದಾಯದ ಸ್ವಾಮಿಗಳಿಗೆ ಮಾಡಿದಂತ ಅಪಮಾನವಾಗಿದೆ. ಕ್ಷಮೆ ಕೇಳಬೇಕಾಗುತ್ತದೆ. ಪೇಮೆಂಟ್ ಸ್ವಾಮಿಗಳಾ..? ಯಡಿಯೂರಪ್ಪ ವೀರಶೈವ ಲಿಂಗಾಯತರ ನಾಯಕ ಅಲ್ಲ, ಯಡಿಯೂರಪ್ಪ ಮಾಸ್ ಲೀಡರ್. ಜಾತ್ಯಾತೀತ ಆಯ್ಕೆ. ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಟ್ಟವರು ಯಡಿಯೂರಪ್ಪ. ಯಾವಾಗ ಯಡಿಯೂರಪ್ಪ ಅವರನ್ನು ಇಳಿಸಿ ಮೋಸ ಮಾಡಿದ್ರಲ್ಲ, ಆಗ ವೀರಶೈವ ಲಿಂಗಾಯತರು ಉಲ್ಟಾ ಹೊಡೆದರು.
ವೀರಶೈವ ಲಿಂಗಾಯತರು ಅಷ್ಟೇ ಅಲ್ಲ ಎಲ್ಲಾ ಸಮುದಾಯದವರು ಉಲ್ಟಾ ಹೊಡೆದರು. ಪಕ್ಷವನ್ನಿ ಕಟ್ಟಿ ಬೆಳೆಸಿದ ನಾಯಕನಿಗೆ ಮೋಸ ಮಾಡಿದ್ದಕ್ಕೆ ಉಲ್ಟಾ ಹೊಡೆದರು. ಮೋದಿ ಅವರು ಮತ್ತೆ ಅವರನ್ನು ಬಿಜೆಪಿಗೆ ಕರೆದುಕೊಂಡು ಬಂದರು. ಒಂದು ಪಕ್ಷ ಗೆಲ್ಲುವುದಕ್ಕೆ ಎಲ್ಲಾ ಅಮುದಾಯಗಳು ಬೇಕು. 2018ರಲ್ಲೂ ಯಡಿಯೂರಪ್ಪ ಅವರಿಗಾಗಿಯೇ ಮತ ಕೊಟ್ಟರು.
ನಿನ್ನ ಬಂಡವಾಳವನ್ನೆಲ್ಲ ಬಿಚ್ತೀವಿ ಅಂತ ಹೇಳಿದ್ದೀನಿ. ಬಸ್ ನಲ್ಲಿ ಟಿಕೆಟ್ ಹರಿತಾ ಇದ್ದದ್ದು ಗೊತ್ತಿದೆ. ಎಲ್ಲವನ್ನು ಬಿಚ್ಚಿಡ್ತೇನೆ. ನಾವೇನು ಆಗರ್ಭ ಶ್ರೀಮಂತರ ಮಕ್ಕಳಲ್ಲ. ಸಮಯ ಬಂದಾಗ ಎಲ್ಲವನ್ನು ಹೇಳ್ತೇನೆ. ಒಂದೇ ಒಂದು ಅಜೆಂಡಾ ಅಂದ್ರೆ ಬಿಜೆಪಿಗೆ ವಿರುದ್ಧವಾಗಿ ಕಾಂಗ್ರೆಸ್ ನವರು ಸುಪಾರಿ ಕೊಟ್ಟವರೆ. ಅವರ ಜೊತೆಗೆ ಒಳ ಹೊಂದಾಣಿಕೆ ಮಾಡಿಕೊಂಡು ಇದಾರೆ. ಇವರು ಪೇಮೆಂಟ್ ಗಿರಾಕಿಗಳು. 12 ತಾರೀಖು ನಿರ್ಣಯ ಮಾಡಿರುವ ಸಭೆಯನ್ನು ಸೇರಿಯೇ ಸೇರ್ತೀವಿ. ದೆಹಲಿಗೂ ಹೋಗ್ತೀವಿ ಇದನ್ನ ನಿಲ್ಲಿಸಬೇಕು ಅಂತ ಹೇಳಿಯೇ ಹೇಳ್ತೀವಿ. ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡಿದ್ರೆ ಜನ ಸಹಿಸಲ್ಲ. ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿದ್ರೆ 10 ಸ್ಥಾನವನ್ನೂ ಗೆಲ್ಲಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.