ವರದಿ ಮತ್ತು ಫೋಟೋ ಕೃಪೆ : ರಂಗಸ್ವಾಮಿ, ಗುಬ್ಬಿ,
![](https://suddione.com/content/uploads/2024/10/gifmaker_me-5-1.gif)
ಮೊ: 99019 53364
ಗುಬ್ಬಿ: ರಥ ಸಪ್ತಮಿ ಹಿನ್ನಲೆ ಲಕ್ಕೇನಹಳ್ಳಿ ಶ್ರೀ ತುಳಸಿ ರಂಗನಾಥ ಸ್ವಾಮಿಯ ಸೂರ್ಯ ಮಂಡಲ ರಥೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಸುಪ್ರಭಾತ ಸೇವೆಯಿಂದ ಆರಂಭವಾಗಿ ರುದ್ರಾಭಿಷೇಕ ನಡೆದು ಮಧ್ಯಾಹ್ನ 1.30 ಕ್ಕೆ ಸಂಪ್ರದಾಯದಂತೆ ಸೂರ್ಯ ಮಂಡಲ ರಥೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ವಿಧಿವತ್ತಾಗಿ ನಡೆಸಲಾಯಿತು.
ತಾಲ್ಲೂಕಿನಲ್ಲಿ ವರ್ಷದ ಪ್ರಥಮ ಜಾತ್ರೆ ಎನಿಸಿಕೊಂಡ ಲಕ್ಕೇನಹಳ್ಳಿ ಜಾತ್ರೆ ವಿಶೇಷ ಸೂರ್ಯ ಪಥ ಬದಲಾಯಿಸುವ ರಥಸಪ್ತಮಿ ದಿನದಂದು ರಂಗನಾಥಸ್ವಾಮಿ ಸೂರ್ಯನ ತೇರು ಅದ್ದೂರಿಯಾಗಿ ನಡೆಸಲಾಗುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರಿಗೆ ಇಲ್ಲಿನ ದಾಸೋಹ ಸಮಿತಿ ಅನ್ನ ಸಂತರ್ಪಣೆ ಆಯೋಜಿಸಿದ್ದರು. ಬಿಸಿಲಿನ ಝಳಕ್ಕೆ ಪಾನಕ ಫಲಾಹಾರ ಸೇನೆಯನ್ನು ಭಕ್ತರು ಆಯೋಜಿಸಿದ್ದರು.
ಮೂರು ದಿನಗಳ ಜಾತ್ರೆಯಲ್ಲಿ ಮಂಗಳವಾರ ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ದವನ ಬಾಳೆಹಣ್ಣು ಎಸೆದು ಭಕ್ತರು ತಮ್ಮ ಹರಕೆ ಕಟ್ಟುವುದು ನಡೆಸುತ್ತಾರೆ.
ಸಂಜೆ ಸ್ವಾಮಿಯವರಿಗೆ ಕರ್ಪೂರ ಸೇವೆ, ವಿಧ್ಯುದ್ದೀಪ ಅಲಂಕಾರದ ಬೆಳ್ಳಿ ಪಲ್ಲಕ್ಕಿ ಉತ್ಸವ ಕಲಾ ಮೇಳ ಮದ್ದು ಬಾಣ ಬಿರುಸು ಜೊತೆಗೆ ಅದ್ದೂರಿ ಮೆರವಣಿಗೆ ಮೂಲಕ ಸ್ವಾಮಿಯನ್ನು ಮೂಲಸ್ಥಾನಕ್ಕೆ ಕರೆತರಲಾಗುವುದು ಎಂದು ದಾಸೋಹ ಸಮಿತಿ ಅಧ್ಯಕ್ಷ ಶಿವರಾಮಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಕನ್ವೀನರ್ ಷಡಕ್ಷರಿ, ಪಣಗಾರ್ ಪಂಚಣ್ಣ, ಸಮಿತಿಯ ಖಜಾಂಚಿ ಕೆಂಪೇಗೌಡ, ಗ್ರಾ ಪಂ ಉಪಾಧ್ಯಕ್ಷರಾದ ಭಾಗ್ಯಮ್ಮ ಪಾಂಡುರಂಗಯ್ಯ, ಗ್ರಾಪಂ ಸದಸ್ಯ ಕೃಷ್ಣಮೂರ್ತಿ, ಮಹೇಂದ್ರ ಕುಮಾರ್, ಗಂಗಾಧರ್, ನರಸಿಯಪ್ಪ ,ಮಂಜುನಾಥ್ ಇತರರು ಇದ್ದರು.
![](https://suddione.com/content/uploads/2025/01/studio-11.webp)