ಮಹಾಕುಂಭಮೇಳ : ಉತ್ತರ ಪ್ರದೇಶ ಸಿಎಂ ಭೇಟಿಯಾದ ವಚನಾನಂದ ಶ್ರೀಗಳು

suddionenews
1 Min Read

ಪ್ರಯಾಗ್ ರಾಜ್: 144 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭಮೇಳವನ್ನು ಕಣ್ತುಂಬಿಕೊಳ್ಳುವುದಕ್ಕೆ ದೇಶದ ಜನ ಪ್ರಯಾಗ್ ರಾಜ್ ಗೆ ಭೇಟಿ ನೀಡುತ್ತಾ ಇದ್ದಾರೆ. ಕೋಟ್ಯಾಂತರ ಜನ, ಸಾಧುಗಳು, ಸ್ವಾಮೀಜಿಗಳೆಲ್ಲಾ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಬರುತ್ತಿದ್ದಾರೆ. ಇದೀಗ ಪ್ರಯಾಗ್ ರಾಜ್ ಗೆ ದಾವಣಗೆರೆಯ ಹರಿಹರದ ಪಂಚಮಸಾಲಿ ಮಠದ ವಚನಾನಂದ ಶ್ರೀಗಳು ಕೂಡ ಭೇಟಿ ನೀಡಿದ್ದಾರೆ.

ಪ್ರಯಾಗ್ ರಾಜ್ ನ ಮಹಾಕುಂಭಮೇಳದ ಪರ್ವತಕಾಲದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಆರ್ಟ್ ಆಫ್ ಲೀವಿಂಗ್ ಶ್ರೀ ಶ್ರೀ ರವಿಶಂಕರ್ ಗುರೂಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಭೇಟಿಯಾಗಿದ್ದಾರೆ. ಈ ವೇಳೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಇನ್ನು ಯೋಗಿ ಆದಿತ್ಯಾ ನಾಥ್ ಅವರಿಗೆ ರವಿಶಂಕರ್ ಗುರೂಜಿ ಅವರು ತಮ್ಮ ಯೋಗ ಸಾಧನೆ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪರಂಪರೆಯನ್ನು ಪರಿಚಯ ಮಾಡಿಕೊಟ್ಟರು.

ಇನ್ನು ಸಿಎಂ ಯೋಗಿ ಆದಿತ್ಯಾ ನಾಥ್ ಕೂಡ ಶ್ರೀಗಳನ್ನ ಹೃದಯ ತುಂಬಿ ಸ್ವಾಗತಿಸಿದರು. ಕರ್ನಾಟಕದಿಂದ ಬಂದ ಹಿನ್ನೆಲೆ ಪ್ರೀತಿಯಿಂದ ಸ್ವಾಗತಿಸಿದರು. ಯೋಗ ಸಾಧನೆ ಮೂಲಕ ಯೋಗಯುಕ್ತ – ರೋಗಮುಕ್ತ ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡಿರುವುದಕ್ಕೆ ಶ್ಲಾಘಿಸಿದರು ಎಂದು ವಚನಾನಂದ ಸ್ವಾಮೀಜಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ವಚನಾನಂದ ಸ್ವಾಮೀಜಿ, ಶ್ರೀ ಶ್ರೀ ರವಿಶಂಕರ ಗುರೂಜಿ ಜೊತೆಗೆ ಪೂಜ್ಯ ಶ್ರೀ ವಿಜಯಾನಂದ ಸರಸ್ವತಿಯವರು ಹಾಗೂ ಜರ್ಮನ್ ದೇಶದ ಯೂರೋಪಿಯನ್ ಪಾರ್ಲಿಮೆಂಟ್ ಸದಸ್ಯಲ ಜೋಶೆಪ್ ಲೆನಿನ್ ಕೂಡ ಉಪಸ್ಥಿತರಿದ್ದರು. ಬಳಿಕ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿ ಪುನೀತರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *