ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆ ಬಂದಾಗೆಲ್ಲ ಹಿಜಾಬ್ ಬಗ್ಗೆಯೇ ಬಹಳ ಚರ್ಚೆಯಾಗುತ್ತದೆ. ಹಿಜಾಬ್ ಬಗ್ಗೆ ಪರ, ವಿರೋಧವೂ ಕೇಳಿ ಬರುತ್ತದೆ. ಆದರೆ ಹಿಜಾಬ್ ವಿಚಾರ ನ್ಯಾಷನಲ್ ಲೆವೆಲ್ ಗೆ ಸುದ್ದಿಯಾಗಿತ್ತು. ಇದೀಗ ಎಸ್ಎಸ್ಎಲ್ಸಿ ಎಕ್ಸಾಂ ಬರ್ತಾ ಇದೆ ಗೃಹ ಸಚಿವ ಜಿ.ಪರಮೇಶ್ವರ್ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸುವುದಕ್ಕೆ ಈ ಬಾರಿ ಅವಕಾಶವಿದೆಯಾ ಎಂಬ ಪ್ರಶ್ನೆಗೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಆ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ. ಚರ್ಚೆ ಮಾಡಿ ಆ ನಂತರ ನಿರ್ಧಾರ ತಿಳಿಸುತ್ತೇವೆ. ಇನ್ನೊಂದು ತಿಂಗಳಲ್ಲಿ ತಿಳಿಸ್ತೇವೆ ಎಂದಿದ್ದಾರೆ.
ಕರ್ನಾಟಕ ಭವನ ಉದ್ಘಾಟನೆಗೆ ಹೋಗ್ತೀರಾ ಎಂದು ಕೇಳಿದಾಗ, ಕರೆದರೆ ಹೋಗ್ತೀನಿ. ಅದಕ್ಕೆ ನಾನೇ ಫೌಂಡೇಶನ್ ಹಾಕಿದ್ದು. ಡಿಸಿಎಂ ಆಗಿದ್ದಾಗ. ಕರೆದರೆ ಹೋಗ್ತೀನಿ ಕರೆಯದೆ ಇದ್ದರೆ ಹೇಗೆ ಹೋಗ್ಲಿ ಎಂದಿದ್ದಾರೆ.
ಪರಮೇಶ್ವರ್ ಅವರ ಜೊತೆಗೆ ಒಂದಷ್ಟು ಸಚಿವರು ಹೈಕಮಾಂಡ್ ನಾಯಕರನ್ನು ಭೇಟಿಯಾಗ್ತಾರೆ ಎಂಬ ಮಾತಿದೆ. ಆ ಬಗ್ಗೆ ಏನು ಹೇಳ್ತೀರಾ ಎಂದಾಗ, ಗೊತ್ತಿಲ್ಲಪ್ಲ. ಯಾರೂ ಇದನ್ನೆಲ್ಲ ಹುಟ್ಟು ಹಾಕುತ್ತಾರೆ ಎಂಬುದು ನನಗಂತು ಗೊತ್ತಿಲ್ಲ. ನನ್ನ ಲೀಡರ್ ಶಿಪ್ ನಲ್ಲಿ ಸಚಿವರು ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡ್ತಾರೆ ಅಂತ ನೀವೆಲ್ಲಾ ಹಾಕಿಕೊಂಡು ಹೊಡಿತಾ ಇದ್ದೀರಾ. ಆದರೆ ಅದು ನನಗೆ ಗೊತ್ತಿಲ್ಲ. ಅಂಥದ್ದು ಯಾವ ಬೆಳವಣಿಗೆಯೂ ನಮ್ಮಲ್ಲಿ ನಡೆಯುತ್ತಿಲ್ಲ. ದೆಹಲಿಗೆ ಏನನ್ನು ತಗೊಂಡು ಹೋಗ್ತಿಲ್ಲ. ಅಂಥ ಯಾವ ರಾಜಕೀಯ ಬೆಳವಣಿಗೆ ಇಲ್ಲ. ನನಗೆ ಇಲಾಖೆಯ ಕೆಲಸ ಇದ್ದಾಗ ದೆಹಲಿಗೆ ಹೋಗ್ತೀವಿ ಅಷ್ಟೇ. ಹೋಗಬಾರದು ಎಂಬ ಕಠಿಣ ನಿಯಮವೇನು ಇಲ್ಲ. ಆದರೆ ಸಮಸ್ಯೆ ಏನೇ ಇದ್ದರು ಇಲ್ಲಿಯೇ ಚರ್ಚೆ ಮಾಡಿಕೊಂಡು ಹೋಗ್ತೇವೆ ಎಂದಿದ್ದಾರೆ.