ಗದಗ: ಕಳೆದ ಕೆಲವು ದಿನಗಳಿಂದಾನೂ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವೆ ಎಲ್ಲವೂ ಸರಿ ಇಲ್ಲ. ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆಸುತ್ತಲೇ ಇದ್ದಾರೆ. ಇದರ ನಡುವೆ ಹೈಕಮಾಂಡ್ ನಿಂದ ಶ್ರೀರಾಮುಲುಗೆ ಬುಲಾವ್ ಕೂಡ ಬಂದಿದೆ. ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಮುಂದೆ ಎಲ್ಲದನ್ನೂ ಹೇಳ್ತೀನಿ ಅಂತಿದ್ದಾರೆ. ಜೊತೆಗೆ ಇನ್ಯಾರ ಮುಲಾಜನ್ನು ಇಟ್ಟುಕೊಳ್ಳದೆ ಮಾತಾಡ್ತೀನಿ ಎಂದು ಸವಾಲು ಹಾಕಿದ್ದಾರೆ.
ಗದಗ ಭೇಟಿ ವೇಳೆ ಮಾತನಾಡಿದ ಅವರು, ರಾಮುಲು ಸುಮ್ಮನೆ ಇದ್ರು, ಇದ್ರು ಅಂತ ಹೇಳುತ್ತಿದ್ದರು. ಇನ್ಮುಂದೆ ಸುಮ್ಮನೆ ಇರೋದಿಲ್ಲ. ನಾನು ಮಾತನಾಡುತ್ತೇನೆ. ಯಾರ ಮುಲಾಜು ಇಲ್ಲದೆ ಮಾತನಾಡುತ್ತೇನೆ. ಮಾತನಾಡಿದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಅಂತ ಸುಮ್ಮನೆ ಇದ್ದೆ. ಈ ಬಾರಿ ನಮ್ಮಂತವರನ್ನ ಅಪಮಾನ ಮಾಡಿದ್ದಾರೆ ಅಂದ್ರೆ ನಾವೂ ಬೀದಿಗೆ ಇಳಿದು ಮಾತನಾಡುವ ಮಂದಿನೆ. ಯಾವುದನ್ನು ಲೆಕ್ಕ ಹಾಕಲ್ಲ ಎಂದು ಹೇಳಿದ್ದಾರೆ.
ಇದೆ ವೇಳೆ ಶ್ರೀರಾಮುಲು ಅವರು ಕಾಂಗ್ರೆಸ್ ಗೆ ಹೋಗ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾನು ಯಾವತ್ತು ಪಾರ್ಟಿ ಬಿಟ್ಟು ಹೋಗಲ್ಲ. ಇದು ರಾಜ್ಯದ ಜನರಿಗೆ ಗೊತ್ತಿದೆ. ಈಗ ಕೈ ಬಿಟ್ಟಿರುವ ಕಾರಣ ಒಳ್ಳೆಯ ವ್ಯಕ್ತಿ ಆಗಿರುವ ಕಾರಣ ಕರೆದಿರಬಹುದು. ಹೋಗಬೇಕು ಅನ್ನೋದು ನನ್ನ ಮನಸ್ಥಿತಿ ಅಲ್ವಾ..? ನಾನು ಹೋಗಬೇಕು ಅಂದ್ರೆ ನನ್ನನ್ನು ತಡೆಯೋದಕ್ಕೆ ಆಗುತ್ತಾ..? ಜೈಲಿನಲ್ಲಿ ಇಡುವುದಕ್ಕೆ ಆಗುತ್ತಾ..? ಈಗಿನ ಕಾಲದಲ್ಲಿ ಯಾರು ಯಾರ ಮಾತನ್ನು ಕೇಳುವುದಿಲ್ಲ. ನನ್ನ ಮನಸ್ಥಿತಿ ಬಿಜೆಪಿಯಲ್ಲಿದೆ. ಮೋದಿ ನೇತೃತ್ವದಲ್ಲಿ ಮತ್ತೆ ಕರ್ನಾಟಕದಲ್ಲಿ ಬಹುಮತದಿಂದ ಬಿಜೆಪಿ ಬರಬೇಕೆಂದು ಕೆಲಸ ಮಾಡಬೇಕು ಎಂದಿದ್ದಾರೆ.