ಬೆಂಗಳೂರು: ಇಂದು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನ. ಹೀಗಾಗಿ ಇಂದು ಚಿತ್ರಕಲಾ ಪರಿಷತ್ ನಲ್ಲಿ ತೇಜಸ್ವಿಯವರ ಕುರಿತು ಛಾಯಾಚಿತ್ರ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಅದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ತೇಜಸ್ವಿಯವರಷ್ಟು ಪ್ರಕೃತಿಯನ್ನ ಪ್ರೀತಿಸಿದವರನ್ನು ನಾನು ನೋಡಿಯೇ ಇಲ್ಲ. ನಾನೂ ಕೂಡ ಸಸ್ಯಶಾಸ್ತ್ರದ ವಿದ್ಯಾರ್ಥಿ. ಎಂಎಸ್ಸಿಯಲ್ಲಿ ಬಾಟನಿಗೆ ಸೀಟ್ ಸಿಗದ ಕಾರಣ ಕಾನೂನು ಪದವಿ ಮೊರೆ ಹೋದೆ. ಅಲ್ಲಿಂದ ಅನಿವಾರ್ಯತೆಯಿಂದ ರಾಜಕಾರಣಕ್ಕೆ ಬಂದೆ ಎಂದಿದ್ದಾರೆ.
ನನಗೆ ಪ್ರೋ.ನಂಜುಂಡಸ್ವಾಮಿ ಅವರ ಪರಿಚಯವಾಗದೆ ಇದ್ದಿದ್ದರೆ ರಾಜಕಾರಣಕ್ಕೂ ಬರ್ತಾ ಇರಲಿಲ್ಲ ಅನ್ನಿಸುತ್ತೆ. ತೇಜಸ್ವಿಯವರ ವಿಭಿನ್ನ ಯೋಚನಾ ಲಹರಿಯ ಶೈಲಿಯೇ ಅವರ ಹೆಗ್ಗುರುತು ಎಂದು ತೇಜಸ್ವಿ ಅವರನ್ನ ನೆನಪಿಸಿಕೊಂಡರು.