ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ಸತತವಾಗಿ 5 ನೇ ಬಾರಿಗೆ ನಿರ್ದೇಶಕರಾಗಿ ನಿಶಾನಿ ಜಯಣ್ಣ ಆಯ್ಕೆ

suddionenews
1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 01: ಚಿತ್ರದುರ್ಗ ನಗರದ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ಗೆ ಕಳೆದ 4 ಬಾರಿ ನಿರ್ದೆಶಕರಾಗಿ ಆಯ್ಕೆಯಾಗಿ ಅಧ್ಯಕ್ಷರಾಗಿ ಸೇವೆಯಲ್ಲಿ ಸಲ್ಲಿಸಿ 5ನೇ ಬಾರಿ ಮತ್ತೇ ನಿರ್ದೆಶಕರಾಗಿ ಆವಿರೋಧವಾಗಿ ಆಯ್ಕೆಯಾಗಿರುವ ನಿಶಾನಿ ಜಯ್ಯಣ್ಣ ರವರನ್ನು ಇಂದು ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯದವರು ಶನಿವಾರ ಸೊಸೈಟಿಯ ಸಭಾಂಗಣದಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಲಾವಿದರಾದ ನಾಗರಾಜ್ ಬೇದ್ರೇ, ನಿನಾಸಂ ರಂಗಭೂಮಿ ಕಲಾವಿದರಾದ ಕೆಪಿಎಂ ಗಣೇಶಯ್ಯ, ಶ್ರೀ ಪ್ರಸನ್ನ ಸೇವಾ ಗಣಪತಿ ಸಮಿತಿಯ ಅಧ್ಯಕ್ಷರಾದ ಗೋಪಾಲರಾವ್ ಜಾಧವ್, ಯೋಗ ಶಿಕ್ಷಕರಾದ ಮುರಳಿ, ವೀರಶೈವ ಸಮಾಜದ ಮುಖಂಡರಾದ ಡಿ.ಆರ್.ಮಂಜುನಾಥ್, ಮಹಾಂತೇಶ್, ಯಾದವ್ ಸಮುದಾಯದ ಮುಖಂಡರಾದ ಚಿಕ್ಕಣ್ಣ, ಕಿರಣ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *