ಚಿತ್ರದುರ್ಗ ಫೆ.01 : ಏಕೀಕೃತ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿದ್ದ ಎಸ್. ಗುರುನಾಥಪ್ಪರವರ ಪುತ್ರರಾದ ಎಸ್.ಜಿ.ಮಂಜುನಾಥ ರವರು (77) ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಈರ್ವರು ಪುತ್ರಿಯರು ಇದ್ದು ಅಪಾರವಾದ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಮಧ್ಯಾಹ್ನ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಪತ್ರಿಕಾ ಪ್ರತಿನಿಧಿ ಆಗಿದ್ದ ಅವರು ಚಿತ್ರದುರ್ಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆಗಿದ್ದು, ಬೆಂಗಳೂರಿನ ಶ್ರೀ ಎಸ್ ನಿಜಲಿಂಗಪ್ಪ ಫೌಂಡೇಷನ್ ಕಾರ್ಯದರ್ಶಿ, ಕರ್ನಾಟಕ ಫಿಲಂಸ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಚಿತ್ರದುರ್ಗ ಎಸ್ ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ನಿರ್ದೇಶಕರಾಗಿದ್ದರಾಗಿದ್ದರು.