2025ರ ಕೇಂದ್ರ ಬಜೆಟ್ ನಲ್ಲಿ ಹಲವು ವಸ್ತುಗಳ ಮೇಲೆ ಬೆಲೆ ಇಳಿಕೆಯಾಗಿದೆ. ಇದು ಮಧ್ಯಮವರ್ಗದವರಿಗೆ ಖುಷಿಯನ್ನು ತಂದು ಕೊಟ್ಟಿದೆ. ಪ್ರತಿ ಬಾರಿ ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ನಿರೀಕ್ಷಿಸಿದ ಬಜೆಟ್ ಮಂಡನೆಯಾಗುವುದಿಲ್ಲ, ಅದರಲ್ಲಿ ಮಧ್ಯಮವರ್ಗದವರಿಗೆ ಅಗತ್ಯವಾದದ್ದು ಇರಲ್ಲ ಅಂತಾನೇ ಆರೋಪವಿತ್ತು. ಇದೀಗ ಈ ಬಾರಿಯ ಬಜೆಟ್ ಮಧ್ಯಮ ವರ್ಗದವರಿಗೆ ಖುಷಿ ನೀಡಿದೆ. ಅಗತ್ಯ ವಸ್ತುಗಳ ಮೇಲೆ ಬೆಲೆ ಇಳಿಕೆಯಾಗಿದೆ.
ಅದರಲ್ಲೂ ಸ್ವದೇಶಿ ಬಟ್ಟೆಗಳು, ಎಲೆಕ್ಟ್ರಿಕ್ ಕಾರುಗಳು, ಚರ್ಮದ ಉತ್ಪನ್ನಗಳು, ಎಲ್ಇಡಿ ಟಿವಿ ಬೆಲೆ, ಕ್ಯಾನ್ಸರ್ ಔಷಧ, ಮೊಬೈಲ್ ಹಾಗೂ ಮೊಬೈಲ್ ಬಿಡಿ ಭಾಗಗಳ ಬೆಲೆ ಇಳಿಕೆಯಾಗಿದೆ. ಕರಕುಶಲ ವಸ್ತುಗಳು, ಚರ್ಮದ ಶೂ, ಬೆಲ್ಟ್, ಫ್ರೋಜನ್ ಫಿಶ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಇಳಿಕೆಯನ್ನು ಮಾಡುವ ಮೂಲಕ ಮಧ್ಯಮ ವರ್ಗದವರಿಗೆ ಈ ಬಾರಿ ಬಂಪರ್ ಬಹುಮಾನವನ್ನೇ ನೀಡಿದೆ.
ಕೇಂದ್ರ ಬಜೆಟ್ ನಲ್ಲಿ ದುಬಾರಿಯಾದ ವಸ್ತುಗಳ ಬಗ್ಗೆಯೂ ತಿಳಿಸಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ ದುಬಾರಿಯಾದ ವಸ್ತುಗಳು ಇವು, ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ, ಕೈಯಲ್ಲಿ ಹೆಣೆದ ಬಟ್ಟೆಗಳು, ತಂತ್ರಜ್ಞಾನ ಕ್ಷೇತ್ರದ ಸರಕುಗಳು, ಮೊಬೈಲ್ ರಿಚಾರ್ಜ್ ಮತ್ತು ಇಂಟರ್ ನೆಟ್ ಸೇವೆಗಳು, ವಿಮಾನ ಟಿಕೆಟ್ ದರ, ಹೈಟೆಕ್ ಎಲೆಕ್ಟ್ರಾನಿಕ್ಸ್, ಆಮದು ಕಾರುಗಳು, ತಂಬಾಕು ಮತ್ತು ಸಿಗರೇಟ್ ದುಬಾರಿಯಾಗಿದೆ.