2025ರ ಕೇಂದ್ರ ಬಜೆಟ್ ನಲ್ಲಿ ಎಂಎಸ್ಎಂಇ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಸಾಲದ ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಈ ಹಿಂದೆ ನೀಡಲಾಗುತ್ತಿದ್ದ 5 ಕೋಟಿ ರೂಪಾಯಿ ಸಾಲದ ಪ್ರಮಾಣವನ್ನು 10 ಕೋಟಿ ಹೆಚ್ಚಿಸಿದ್ದಾರೆ. ದೇಶದ ಉತ್ಪಾದನೆ ಹಾಗೂ ಸೇವೆಗಳಲ್ಲಿ ಎಂಎಸ್ಎಂಇಗಳು ಎರಡನೇ ಇಂಜಿನ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಒಟ್ಟು 5.7 ಕೋಟಿ ಎಂಎಸ್ಎಂಇಗಳು ಇದಾವೆ. 1 ಕೋಟಿ ರಿಜಿಸ್ಟರ್ ಆಗಿರುವ ಎಂಎಸ್ಎಂಇಗಳಲ್ಲಿ ಸುಮಾರು 7.5 ಕೋಟಿ ಜನರು ಉದ್ಯೋಗಿಗಳಾಗಿದ್ದಾರೆ.
ಉತ್ಪಾದನಾ ವಲಯದಲ್ಲಿ ಎಂಎಸ್ಎಂಇಗಳು ಸುಮಾರು ಶೇಕಡಾ 36 ರಷ್ಟು ಕೊಡುಗೆ ನೀಡುತ್ತಿವೆ. ಇದರಿಂದ ಮುಂದೊಂದು ದಿನ ದೇಶವು ಉತ್ಪಾದನಾ ವಲಯದ ಹಬ್ ಆಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನಿರ್ಮಲಾ ಸೀತರಾಮನ್ ತಮ್ಮ ಬಜೆಟ್ ನಲ್ಲಿ ಘೋಷಣೆ ವೇಳೆ ಹೇಳಿದ್ದಾರೆ.
ಮೊದಲ ಬಾರಿಗೆ ಉದ್ಯಮ ಆರಂಭಿಸುವ 5 ಲಕ್ಷ ಎಸ್ಸಿ, ಎಸ್ಟಿ ಮತ್ತು ಮಹಿಳೆಯರಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಅಲ್ಲಿ ಅವರಿಗೆ 2 ಕೋಟಿ ರೂಪಾಯಿವರೆಗೆ ಸಾಲವನ್ನು ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ದೇಶದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಂಖ್ಯೆ ಸುಮಾರು 1 ಕೋಡಿ ಇದ್ದು, 5.7 ಕೋಟಿ ಜನರು ಅವುಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಭಾರತವನ್ನು ವಿಶ್ವದಲ್ಲಿಯೇ ಅಗ್ರ ಪಂಕ್ತಿಯ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಇದು ಸಹಕಾರಿಯಾಗಿದೆ ಎಂದು ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.
ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ಮೈಕ್ರೋ ಕಂಪನಿಗಳಿಗೆ 5 ಲಕ್ಷದವರೆಗೂ ಕ್ರೆಡಿಟ್ ಕಾರ್ಡ್ ನೀಡಲಾಗುವುದು. ಮೊದಲ ಹಂತದಲ್ಲಿ 10 ಲಕ್ಷ ಕಾರ್ಡ್ ವಿತರಣೆಯ ಗುರಿ ಹೊಂದಲಾಗಿದೆ. ಇಷ್ಟೇ ಅಲ್ಲದೆ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜಿಸಲು ಹೊಸ ಯೋಜನೆ ಜಾರಿಗೆ ತರಲಾಗುವುದು. ಇದರಿಂದ 22 ಲಕ್ಷ ಉದ್ದಿಮೆದಾರರಿಗೆ ಅನುಕೂಲವಾಗಲಿದೆ.