ನವದೆಹಲಿ: ಸದ್ಯ ದೇಶದೆಲ್ಲೆಡೆ ಕೊರೊನಾ ಮೂರನೆ ಅಲೆಯ ಭಯ ಒಂದು ಕಡೆಯಾದ್ರೆ ಮತ್ತೊಂದು ಕಡೆ ಈ ಒಮಿಕ್ರಾನ್ ಹೆಚ್ಚಾಗುತ್ತಿರುವ ಆತಂಕ ಮನೆ ಮಾಡಿದೆ. ಹೀಗಾಗಿ ಜನ ಮತ್ತೆಲ್ಲಿ ಲಾಕ್ಡೌನ್ ಮಾಡ್ತಾರೋ ಮತ್ತೆಲ್ಲಿ ದುಡಿಮೆಗೆ ಕುತ್ತು ಬೀಳುತ್ತೋ ಎಂಬ ಆತಂಕದಲ್ಲೇ ಇದ್ದಾರೆ. ಈ ಬೆನ್ನಲ್ಲೇ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
When it comes to people’s pain & loss, GOI is sleeping.
Let’s wake them up! #SpeakUpforCovidNyay
— Rahul Gandhi (@RahulGandhi) December 4, 2021
ಜನರು ಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರ ಮಾತ್ರ ನಿದ್ರಿಸುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ನೋವು ಮತ್ತು ಕಷ್ಟದಲ್ಲಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಮಾತ್ರ ನಿದ್ರಿಸುತ್ತಿದೆ. ಬನ್ನಿ ಅವರನ್ನು ಎಬ್ಬಿಸೋಣಾ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ #SpeakUpforCovidNyay ಬಳಕೆ ಮಾಡಿದ್ದಾರೆ.
ದೇಶಕ್ಕೆ ಕೊರೊನಾ ಸೋಂಕು ವಕ್ಕರಿಸಿದ ಮೊದಲ ದಿನದಿಂದಲೂ ಜನರನ್ನು ಪ್ರತಿ ಹಂತದಲ್ಲೂ ಜೀವ ಹಿಂಡಿದ್ದು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಡ್, ವೆಂಟಿಲೇಟರ್, ಆಮ್ಲಜನಕ, ಕೊನೆಗೆ ಸ್ಮಶಾನದಲ್ಲಿಯೂ ಜನರನ್ನು ಸಾಲಿನಲ್ಲಿ ನಿಲ್ಲಿಸಿದರು. ಸರ್ಕಾರದ ಬೇಜವಾಬ್ದಾರಿಯಿಂದಾಗಿ ಪ್ರಾಣ ಬಿಟ್ಟವರ ಕುಟುಂಬಗಳಿಗೆ 4 ಲಕ್ಷ ಪರಿಹಾರ ನೀಡಲೇಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಘಟಕವೂ ಟ್ವೀಟ್ ಮಾಡಿದೆ.