ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಶ್ರೀರಾಮುಲು ವರ್ಸಸ್ ಜನಾರ್ದನ ರೆಡ್ಡಿ ವಿಚಾರ ಚರ್ಚೆಯಲ್ಲಿರುವಾಗಲೇ ಡಿಕೆಶಿ ಅವರು ಆಫರ್ ಕೊಟ್ಟಿದ್ದಾರೆ ಎಂಬುದು ಚರ್ಚೆಗೆ ಬರ್ತಿದೆ. ಈ ಬಗ್ಗೆ ಶ್ರೀರಾಮುಲು ಹಾಗೂ ಡಿಕೆ ಶಿವಕುಮಾರ್ ಇಬ್ಬರು ಪ್ರತಿಕ್ರಿಯೆ ನೀಡಿದ್ದಾರೆ

ನನ್ನ ಸ್ಟ್ಯಾಂಡ್ ವೆರಿ ಕ್ಲಿಯರ್. ಸುತ್ತಿ ಬಳಸಿ ಮಾತಾಡಲ್ಲ. ಇವತ್ತು ಇಡೀ ರಾಜ್ಯದಲ್ಲಿ 2019ರ ಲೋಕಸಭಾ ಚುನಾವಣೆ ತೆಗೆದು ನೋಡಿ. ರಾಮುಲಹ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಬೇಕು ಎಂಬುದಿತ್ತು. ರಾಜ್ಯದ ನಾಯಕರು ಕೂಡ ಅಂದು ಭರವಸೆ ಕೊಟ್ಟಿದ್ದರು. ಆದರೆ ಆ ಸಂಧರ್ಭದಲ್ಲಿ ಮೂವರನ್ನ ಡಿಸಿಎಂ ಮಾಡಿದರು. ಆದರೂ ನನಗೆ ಎಲ್ಲಾ ರೀತಿಯ ಗೌರವ ನೀಡಿದ್ದಾರೆ. ಇಂದು ಕೂಡ ಪಕ್ಷ ನನ್ನನ್ನ ಬಿಟ್ಟು ಕೊಡಲ್ಲ ಎಂಬ ನಂಬಿಕೆ ಇದೆ. ಅಧಿಕಾರ ಶಾಶ್ವತ ಅಲ್ಲ. ಲಕ್ಷಾಂತರ ಮಂದಿ ಕಾರ್ಯಕರ್ತರು ಸೇರಿದರೆ ಒಂದು ಪಕ್ಷ. ನಿಮ್ಮ ಮಾಧ್ಯಮದ ಮೂಲಕ ಬಹಿರಂಗವಾಗಿ ಕಾಂಗ್ರೆಸ್ ನವರು ಕರೆಯುತ್ತಿದ್ದಾರೆ. ನಾನು ಒಳಗೊಳಗೆ ಮಾಡುವಂತವನಲ್ಲ. ಅಂತದ್ದೇನಾದರೂ ಇದ್ರೆ ನಿಮಗೆ ತಿಳಿಸುತ್ತೇನೆ. ಒಳ್ಳೆಯವರಿದ್ದರೇನೆ ಪಕ್ಷಗಳಿಗೆ ಕರೆಯುವುದು. ನಾನು ಸೋತಿದ್ರು ಕೂಡ, ಅಧಿಕಾರ ಇಲ್ಲದೆ ಇದ್ರು ಕೂಡ, ಅವರು ಅಧಿಕಾರದಲ್ಲಿರುವ ಪಾರ್ಟಿ. ನನ್ನನ್ನ ಕರೆಯುತ್ತಾರೆ ಅಂದ್ರೆ ಅಷ್ಟು ಗೌರವ ಉಳಿಸಿಕೊಂಡಿದ್ದೀನಿ ಅಂತ ಅರ್ಥ ಎಂದಿದ್ದಾರೆ.
ಶ್ರೀರಾಮುಲು ಅವರು ಕಾಂಗ್ರೆಸ್ ಸರ್ಕಾರಕ್ಕೆ ಬರ್ತಾರಾ ಎಂಬ ಮಾತಿಗೆ ಸಿಡಿದೆದ್ದ ಡಿಕೆ ಶಿವಕುಮಾರ್, ಈಗ ಪಾರ್ಟಿಗೆ ಕಾಲನ್ನ ಇಟ್ಟು ಮನೆಯನ್ನೆ ಹೊಡೆಯೋಕೆ ನೋಡ್ತಾ ಇದ್ದಾರಾ..? ನಾನ್ಯಾಕೆ ಅವನ ಹೆಸರನ್ನ ತಗೊಂಡು ದೊಡ್ಡನಾಗಿ ಮಾಡ್ಲಿ. ಅವನು ನನ್ನ ಹೆಸರು ತಗೊಂಡು ದೊಡ್ಡವನಾಗಿ ಬಿಟ್ಟವನೆ. ಅವನು ನೋಡಿದ್ನಾ, ಯಾರ್ಯಾರ ಜೊತೆಗೆ ಅವನೇ ಸಂಪರ್ಕದಲ್ಲಿದ್ದ ಎಂಬುದನ್ನು ಚರ್ಚೆ ಮಾಡೋದು ಬೇಡ. ನಮ್ಮ ಹೆಸರನ್ನ ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ. ನನ್ನ ಹತ್ತಿರ ರಾಮುಲು ಮಾತಾಡಿಲ್ಲ, ಸಿಕ್ಕಿಲ್ಲ. ಈ ಹಿಂದೆ ಕೇಳಿದ್ದೆ. ಎಲೆಕ್ಷನ್ ಗೂ ಮುಂಚೆ ಆಫರ್ ಕೊಟ್ಟಿದ್ದೆ. ಇಲ್ಲಿಯೇ ಉಳಿದುಕೊಳ್ತೀನಿ ಎಂದಿದ್ದ. ನನ್ನ ಟೇಬಲ್ ಗೆ ಕಾಲಿಟ್ಟಾಗ ಯೋಚನೆ ಮಾಡ್ತೀನಿ ಎಂದಿದ್ದಾರೆ.


