ಜನಾರ್ದನ ರೆಡ್ಡಿ – ಶ್ರೀರಾಮುಲು ಜಟಾಪಟಿ : ಡಿಕೆಶಿಯೇ ಕಾರಣ ಎಂದ ರೆಡ್ಡಿ ಮಾತಿಗೆ ಡಿಸಿಎಂ ಏನಂದ್ರು..?

suddionenews
1 Min Read

ಶ್ರೀರಾಮುಲು ನಡುವಿನ ಮನಸ್ತಾಪದ ನಡುವೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಕೂಡ ಪ್ರಸ್ತಾಪವಾಗಿದೆ. ಇಂದು ಸುದ್ದಿಗೋಷ್ಟಿ ನಡೆಸಿದ ಜನಾರ್ದನ ರೆಡ್ಡಿ ಅವರು, ಶ್ರೀರಾಮುಲು ಬೇಕು ಬೇಡ ಎಂದರು ಸಾಯೋ ತನಕ ಅವನನ್ನು ಸ್ನೇಹಿತನಾಗಿಯೆರ ನೋಡುತ್ತೇನೆ. ಪಕ್ಷ ಬಿಡೋದು ಅವರ ವೈಯಕ್ತಿಕ ವಿಚಾರ. ಹೋಗೊದಾದ್ರೆ ಹೋಗಲಿ. ಹೋದಾಗ ನನ್ನ ಮೇಲೆ ಆರೋಪ ಮಾಡುವುದು ಎಷ್ಟು ಸರಿ. ಬಳ್ಳಾರಿ ಭಾಗದಲ್ಲಿ ಜನರು ಮಾತಾಡ್ತಾ ಇದಾರೆ. ಡಿಕೆ ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳಬೇಕೆಂದು ಮಾತಾಡ್ತಾ ಇದ್ದಾರೆ ಎಂದಿದ್ದಾರೆ.

ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ನನ್ನನ್ನು ಯಾರೂ ಭೇಟಿ ಮಾಡಿಲ್ಲ‌‌ ಇದು ಅವರ ಪಕ್ಷದ ಆಂತರಿಕ ಸಂಘರ್ಷವೇ ಹೊರತು ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಅವರೇ ಬಹುಶಃ ಪಕ್ಷಕ್ಕೆ ಕಳುಹಿಸಬೇಕೆಂದು ಪ್ರಯತ್ನಿಸುತ್ತಿರಬೇಕೆಂದು ಪ್ರತಿಕ್ರಿಯೆ ನೀಡಿದ್ದಾರೆ.

ರೆಡ್ಡಿ ಅವರ ಮಾತಿಗೆ ಶ್ರೀರಾಮುಲು ಕೂಡ ಪ್ರತಿಕ್ರಿಯೆ ನೀಡಿದ್ದು, ನಾನೇನು ಹಾದಿಬೀದಿಯಲ್ಲಿ ಓಡಾಡುವ ವ್ಯಕ್ತಿ ಏನಲ್ಲ. ನನ್ನದು ರಾಜಕಾರಣದ ಫ್ಯಾಮಿಲಿ. ಅವತ್ತಿನ ಕಾಲದಲ್ಲಿಯೇ ರಾಜೀವ್ ಗಾಂಧಿ ಅವರು ನಮ್ಮ ಮಾವನ ಬಳಿ ಮಾತಾಡುತ್ತಿದ್ದರು. ಅವತ್ತಿನ ಕಾಲದಲ್ಲಿ ನನ್ನ ಸೋದರ ಮಾವಂದಿರು ರಾಜಕೀಯದಿಂದಾನೇ ಬಂದವರು. ರಾಮುಲು ಬಗ್ಗೆ ಸುಳ್ಳಿನ ಮೇಲೆ ಕೋಟೆ ಕಟ್ಟಿಕೊಂಡು ಬರ್ತಾ ಇದಾರೆ. ದಬ್ಬಾಳಿಕೆ ಮಾಡಿದವರ ವಿರುದ್ಧ ಹೋರಾಡಿದ್ದೀನಿ. ಬಡವರಿಗೆ ಅನ್ಯಾವಾದಗ ಮುಂದೆ ನಿಂತಿದ್ದೀನಿ. ಬಳ್ಳಾರಿ ಜನತೆಗೆ ಗೊತ್ತು ರಾಮುಲು ಹೋರಾಟದಿಂದ ಮೇಲೆ ಬಂದವನು ಅಂತ. ಯಾರ ಕೃಪಾಶೀರ್ವದ, ಕೃಪಾ ಕಟಾಕ್ಷದಿಂದ ಮೇಲೆ ಬಂದವನಲ್ಲ ಎಂದು ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *