ಚಿತ್ರದುರ್ಗ: ಜಿಲ್ಲೆಯ ವಿವಿಧ ತಾಲ್ಲೂಕಿಗೆ ನೂತನ ಬಿಜೆಪಿ ನೂತನ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಕೆ. ಅಭಿನಂದನ್ ವೇಣುಕಲ್ ಗುಡ್ಡ, ಚಿತ್ರದುರ್ಗ ನಗರ ಲೋಕೇಶ್ ಕುಮಾರ್, ಹೊಳಲ್ಕೆರೆ ಎಇ. ವಸಂತ್ ಕುಮಾರ್ ಹಾಗೂ ಚಿತ್ರದುರ್ಗ ಗ್ರಾಮಾಂತರ ಕೆ.ನಾಗರಾಜಪ್ಪ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆ. ಅಭಿನಂದನ್ ಅವರಿಗೆ ನೂತನ ಅಧ್ಯಕ್ಷ ಪಟ್ಟ ಲಭಿಸಿದೆ.
ಭಾರತೀಯ ಜನತಾ ಪಾರ್ಟಿ 2024 – 25ರ ಸಂಘಟನಾ ಪೂರ್ವದ ಕಾರ್ಯದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಚಿತ್ರದುರ್ಗ ಗ್ರಾಮಾಂತರ ಮತ್ತು ಚಿತ್ರದುರ್ಗ ನಗರ ಮಂಡಲಗಳ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಯಾಗಿ ಸಾಮಾನ್ಯ ಸದಸ್ಯತ್ವ ,ಸಕ್ರಿಯ ಸದಸ್ಯತ್ವ ಮತ್ತು ಬೂತ್ ಸಮಿತಿ ರಚನೆ ಯಶಸ್ವಿಯಾಗಿರುವುದಕ್ಕೆ ಅಭಿನಂದನೆಗಳು. ಹಾಗಾಗಿ ಸಂಬಂಧಪಟ್ಟ ಮಂಡಲಗಳಲ್ಲಿ ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕ್ಷೇತ್ರ ಹಾಗೂ ಜಿಲ್ಲಾ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ಕ್ಷೇತ್ರದ ಪ್ರಮುಖರು, ಹಿರಿಯರ ಜೊತೆ ಸಮಾಲೋಚಿಸಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದ್ದೇವೆ. ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀ ಅಣಬೇರು ಜೀವನ್ ಮೂರ್ತಿ ರವರ ಲಿಖಿತ ಆದೇಶದ ಮೇರೆಗೆ ನೂತನ ಮಂಡಲಗಳ ಅಧ್ಯಕ್ಷರನ್ನ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಎ. ಮುರಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ನೂತನ ಅಧ್ಯಕ್ಷ ಕೆ ಅಭಿನಂದನ್ ಪ್ರತಿಕ್ರಿಯಿಸಿ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಪಕ್ಷದ ವರಿಷ್ಠರಿಗೆ, ರಾಜ್ಯಾಧ್ಯಕ್ಷರಿಗೆ, ಸ್ಥಳೀಯ ನಾಯಕರಿಗೆ ಹಾಗೂ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಪಕ್ಷದ ನೆಲೆಗಟ್ಟಿನಲ್ಲಿ ನಿಭಾಯಿಸಲಾಗುವುದು. ಎಲ್ಲಾ ಹಿರಿಯ ಹಾಗೂ ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ಶೀಘ್ರದಲ್ಲೇ ಕ್ಷೇತ್ರಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮಂಡಲ ಅಧ್ಯಕ್ಷ ಸ್ಥಾನವನ್ನು ಯುವಕನಿಗೆ ನೀಡಿದ್ದು ಹೆಚ್ಚು ಸಂಘಟನೆಗೆ ಅನುಕೂಲವಾಗಲಿದೆ. ಕಳೆದ ಕೊರೋನಾ ಸಂದರ್ಭದಲ್ಲಿ ಧರ್ಮಪುರ ಹೋಬಳಿಯಲ್ಲಿ ಎಲ್ಲಾ ಗ್ರಾಮಗಳ ಜನತೆಗೆ ಕಿಟ್ ವಿತರಣೆ ಮಾಡುವ ಮೂಲಕ ಎಲ್ಲರ ಗಮನ ಸೇಳೆದಿದ್ದ ಕೆ. ಅಭಿನಂದನ್ ಅವರು ಈಗಾಗಲೇ ತಾಲ್ಲೂಕಿನಾದ್ಯಂತ ಮದುವೆ, ದೇವರ ಉತ್ಸವ, ನಾಟಕ ಈಗೆ ವಿವಿಧ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಎಲೆ ಮರೆ ಕಾಯಿಯಂತೆ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.
ಯುವಕರತ್ತ ಹೆಜ್ಜೆ : ಹಿರಿಯೂರು ತಾಲ್ಲೂಕಿನ ವೇಣುಕಲ್ ಗುಡ್ಡ ಗ್ರಾಮದವರಾದ ಅಭಿನಂದನ್ ಅವರು ತಾಲ್ಲೂಕಿನಲ್ಲಿ ಜೀವದಾತೆ ಫೌಂಡೇಶನ್ ಸ್ಥಾಪಿಸಿಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತುಕೊಟ್ಟಿದ್ದಾರೆ. ಆ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕ, ಪೆನ್ನು, ಬ್ಯಾಗ್, ಸಮವಸ್ತ್ರ ಸೇರಿದಂತೆ ಶಾಲೆಗೆ ಸುಣ್ಣ ಬಣ್ಣ ಮಾಡಿಸುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ತಾಲೂಕಿನಲ್ಲಿ ಸಾವಿರಾರು ಯುವಕರು ಜೀವದಾತೆ ಫೌಂಡೇಶನ್ ಸಂಸ್ಥೆಯ ಸದಸ್ಯರಾಗಿದ್ದು, ಅಭಿನಂದನ್ ಅವರ ಪಕ್ಷ ಸಂಘಟನೆಗೆ ಮತ್ತೊಷ್ಟು ಶಕ್ತಿ ನೀಡಲಿದೆ ಎನ್ನಬಹುದು.