ಚಿತ್ರಹಳ್ಳಿಯಲ್ಲಿ 76ನೇ ಗಣರಾಜ್ಯೋತ್ಸವದಂದು ಉಚಿತ ಆರೋಗ್ಯ ತಪಾಸಣೆ

suddionenews
1 Min Read

 

ಸುದ್ದಿಒನ್, ಹೊಳಲ್ಕೆರೆ, ಜನವರಿ. 22 : ತಾಲ್ಲೂಕಿನ
ಚಿತ್ರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಆವರಣದಲ್ಲಿ ಜನವರಿ 26 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಶಾಲಾ ಕಟ್ಟಡ ಉದ್ಘಾಟನೆ ಸಮಾರಂಭ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಹೊಳಲ್ಕೆರೆ ಶಾಸಕರಾದ ಡಾ. ಎಂ. ಚಂದ್ರಪ್ಪ, ಅಪರ ಜಿಲ್ಲಾಧಿಕಾರಿಗಳಾದ ಬಿ. ಟಿ. ಕುಮಾರ್ ಸ್ವಾಮಿ, ಹೊಳಲ್ಕೆರೆ ತಹಸೀಲ್ದಾರ್ ಬಿ. ಬಿ. ಫಾತಿಮಾ, ಬಿಇಒ ಶ್ರೀನಿವಾಸ್, ಆರೋಗ್ಯ ಅಧಿಕಾರಿಗಳಾದ ಟಿ ಡಿ ರೇಖಾ ಆಗಮಿಸಲಿದ್ದಾರೆ.

ಶಿಬಿರದ ಆಯೋಜಕರಾದ ಚಿತ್ರಹಳ್ಳಿ ಜಿ ಎಂ ಲವಕುಮಾರ್ ಮಾತನಾಡಿ ಚಿತ್ರಹಳ್ಳಿ ಹಾಗೂ ಜಿಲ್ಲೆಯ ಸಾರ್ವಜನಿಕರಿಗೆ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು ಈ ಶಿಬಿರದ ಉಪಯೋಗ ಪಡವೆ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶಿಬಿರದಲ್ಲಿ ಕಿವಿ, ಮೂಗು, ಗಂಟಲು, ಕಣ್ಣಿನ ತಪಾಸಣೆ, ಕೀಲು ನೋವು, ಮಕ್ಕಳಿಗೆ ಆರೋಗ್ಯ ಸಮಸ್ಯೆ, ದಂತ ಸಮಸ್ಯೆ,ಹಾಗೆಯೇ ಆಯುರ್ವೇದ ಚಿಕಿತ್ಸೆ ಕೂಡ ಇರುತ್ತದೆ.

ಖ್ಯಾತ ತಜ್ಞ ವೈದ್ಯರಾದ ಡಾ. N B ಪ್ರಹ್ಲಾದ್, ಸ್ತ್ರೀರೋಗ ತಜ್ಞರಾದ ತೊಯಿಜಾಕ್ಷಿ ಬಾಯಿ, ಡಾ. ಪಾಲಕ್ಷಪ್ಪ, ಡಾ. ಎಸ್ ಪಿ ಬಸವಂತಪ್ಪ, ರೋಷನ್ ಡಾ.ರೇಷ್ಮಾ ಮಸೂತಿ, ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಬಸವೇಶ್ವರ ಡೆಂಟಲ್ ಕಾಲೇಜಿನ ನುರಿತ ವೈದ್ಯರುಗಳು ಆಗಮಿಸುತ್ತಾರೆ ಎಂದು ತಿಳಿಸಿದರು.

ಶಿಬಿರದ ಇನ್ನೊಬ್ಬ ಆಯೋಜಕರಾದ ಎಸ್. ಕೆಂಚವೀರಪ್ಪ, ಉಪನ್ಯಾಸಕರು ಮತ್ತು ಯೋಗ ಶಿಕ್ಷಕರು ಮಾತನಾಡಿ, ಚಿಕಿತ್ಸೆಗೆ ಬರುವವರು ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ ಜೆರಾಕ್ಸ್ ತರಬೇಕು. ಶಿಬಿರದ ಪ್ರಾರಂಭದ ಒಂದು ಗಂಟೆಯ ಮುಂಚೆ ನೊಂದಣಿ ಮಾಡಿಸಬೇಕು. ಹಾಗೆಯೇ. ಈ ಕೆಳಗಿರುವ. ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು ಎಂದು ತಿಳಿಸಿದರು.

9611557555
9901538657

Share This Article
Leave a Comment

Leave a Reply

Your email address will not be published. Required fields are marked *