ಸುದ್ದಿಒನ್, ಚಿತ್ರದುರ್ಗ, ಜನವರಿ. 21 : ಬಡವರಿಗೆ ಹಂಚಿಕೆ ಮಾಡಬೇಕಾದ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಐಮಂಗಲ ಪೊಲೀಸರು ಬಂಧಿಸಿದ್ದಾರೆ.

ಚಂದ್ರಶೇಖರ, ಗುರು, ವೀರೇಶ ಮತ್ತು
ಮುಜ್ಜು ಬಂಧಿತರು. ಅವರಿಂದ ಲಾರಿ ಮತ್ತು ಲಾರಿಯಲ್ಲಿದ್ದ ಸುಮಾರು 15 ಟನ್ ಪಡಿತರ ಅನ್ನ ಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಐಮಂಗಲ ಠಾಣೆ ವ್ಯಾಪ್ತಿಯಲ್ಲಿ ಜನವರಿ 15 ರಂದು
ಅಕ್ರಮವಾಗಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟ ಮಾಡುತ್ತಿರುತ್ತಾರೆ ಎಂಬ ಖಚಿತವಾಗಿ ಮಾಹಿತಿ ಮೇರೆಗೆ ಗುಯಿಲಾಳು ಟೋಲ್ ಪ್ಲಾಜಾದಲ್ಲಿ ಐಮಂಗಲ ವೃತ್ತ ನಿರೀಕ್ಷಕರಾದ ಎನ್ ಗುಡ್ಡಪ್ಪ ಮತ್ತು ಐಮಂಗಲ ಠಾಣೆಯ ಪಿಎಸ್‌ಐ ಶ್ರೀಮತಿ ಎಂ. ಟಿ. ದೀಪು ಹಾಗೂ ಸಿಬ್ಬಂಧಿಯವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಈ ವೇಳೆ ಸುಮಾರು 5 ಟನ್ ನಷ್ಟು ಅನ್ನಭಾಗ್ಯ ಅಕ್ಕಿ ಇರುವುದು ಕಂಡು ಬಂದಿರುತ್ತದೆ. ನಂತರ ಸ್ಥಳಕ್ಕೆ ಹಿರಿಯೂರು ಅಹಾರ ಶಿರಸ್ತೇದಾರ್ ಅದ ಎನ್ ಲಿಂಗರಾಜು ರವರು ಭೇಟಿ ನೀಡಿ ಪರಿಶೀಲಿಸಿದಾಗ ಸರ್ಕಾರದ ಅನ್ನ ಭಾಗ್ಯ ಯೋಜನೆಯ ಅಕ್ಕಿ ಇರುವುದು ತಿಳಿದು ಬಂದಿದೆ.
ಕೂಡಲೇ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ದಾಳಿ ಕೈಗೊಂಡು ಲಾರಿ ಮತ್ತು ಅನ್ನಭಾಗ್ಯ ಅಕ್ಕಿಯನ್ನು ಅಮಾನತು ಪಡಿಸಿಕೊಂಡ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.


