ಬೆಂಗಳೂರು: ಆ ಬೆಲೆ ಏರಿಕೆ ಈ ಬೆಲೆ ಏರಿಕೆ ಹೀಗೆ ಪ್ರತಿ ದಿನ ಬೆಲೆ ಏರಿಕೆ ವಿಚಾರ ಕೇಳಿ ಕೇಳಿನೇ ಜನಸಾಮಾನ್ಯ ನೊಂದು ಬೆಂದು ಹೋಗಿದ್ದಾನೆ. ದುಡಿಯುವ ಸಂಬಳ ಮೂರು ಕಾಸಾದ್ರೆ ಖರ್ಚಾಗೋದು ಮಾತ್ರ ಆರು ಕಾಸು ಎಂಬಂತಾಗಿದೆ. ಹೀಗಾಗಿ ಯಾವುದಾದರೂ ಬೆಲೆ ಇಳಿಕೆಯಾಗಬಾರದ ಎನ್ನುತ್ತಿದ್ದರೆ ಇತ್ತ ಮತ್ತೊಂದರ ಬೆಲೆ ಏರಿಕೆಯಾಗುತ್ತಿದೆ.
ಮೂಲಗಳ ಪ್ರಕಾರ ಸಿಮೆಂಟ್ ವೆಲೆಯೂ ಏರಿಕೆಯಾಗಲಿದೆಯಂತೆ. ಕೊರೊನಾ ಸಮಯದಲ್ಲಿ ಕಂಪ್ಲೀಟ್ ಆಗಿ ಬೆಲೆಗೆ ಡಿಮ್ಯಾಂಡ್ ಕುಸಿತ ಕಂಡಿತ್ತು. ಆದ್ರೆ ಪ್ರಸ್ತುತ ಸಮಯದಲ್ಲಿ ಡಿಮ್ಯಾಂಡ್ ಬಂದಿದ್ದು, ಬೆಲೆ ಏರಿಕೆ ಮಾಡಲು ಕಂಪನಿಗಳು ನಿರ್ಧರಿಸಿವೆ ಎನ್ನಲಾಗಿದೆ.
ಸಿಮೆಂಟ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಸಿಮೆಂಟ್ ಬೆಲೆಯಲ್ಲೂ ಏರಕೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಂದು ಸಿಮೆಂಟ್ ಚೀಲಕ್ಕೆ 15-20 ರೂಪಾಯಿ ಏರಿಕೆಯಾಗಬಹುದು. ದಿನನಿತ್ಯ ಬಳಸುವ ವಸ್ತುವಲ್ಲದೆ ಇದ್ದರೂ ಮನೆ ಕಟ್ಟಬೇಕೆಂಬ ಮಧ್ಯಮ ವರ್ಗದ ಹಾಗೂ ಬಡ ಜನರಿಗೆ ಇದು ಕೂಡ ಹೊರೆಯೇ ಆಗಲಿದೆ.