ಬೆಂಗಳೂರು: ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿದೆ. ಆದ್ರೆ ಅನುಶ್ರೀ ಆರೋಪಿ ಎಂದು ಹೇಳಲಾಗಿಲ್ಲ. ಈ ವಿಚಾರಕ್ಕೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಫುಲ್ ಗರಂ ಆಗಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಟಿ ನಡೆಸಿದ ಪ್ರಶಾಂತ್ ಸಂಬರಗಿ, ಇಡೀ ಪ್ರಕರಣದಲ್ಲಿ ಅನುಶ್ರೀ ಅವರನ್ನು ಬಚಾವ್ ಮಾಡುವ ಎಲ್ಲಾ ಕೆಲಸ ನಡೆದಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಈ ಪ್ರಕರಣದ ತನಿಖೆ ಮಾಡ್ತಿದ್ದ ಶಿವಪ್ರಕಾಶ್ ರನ್ನ ವರ್ಗಾವಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಪೊಲೀಸರು ವಿಚಾರಣೆಗೆ ಕರೆದಾಗ ಬರೋದಕ್ಕೇನೆ ಸಾಕಷ್ಟು ನಾಟಕ ಆಡಿದ್ರು. ಫೇಸ್ ಬುಕ್ ಲೈವ್ ಬಂದು ನಾನ್ ತುಂಬಾ ಅಮಾಯಕಿ ಅಂತ ಅಂದ್ರು. ನನ್ನ ಸ್ತ್ರೀ ವಿರೋದಿ ಥರ ಮಾಡಿದ್ರು. ಈ ಪ್ರಕರಣದಲ್ಲಿ ಮಂಗಳೂರು ಪೊಲೀಸರು ವೀಕ್ ಆಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಅನುಶ್ರೀಯನ್ನ ಬಚಾವ್ ಮಾಡೋದಕ್ಕೆ ತರುಣ್ ನನ್ನ ಬಿಟ್ಟು ಕಳುಹಿಸಲಾಗಿದೆ. ಯಾಕೆ ಅಲ್ಲೇನು ಫ್ಯಾಷನ್ ಶೋ ನಡೀತಾ ಇತ್ತ ಎಂದು ಪ್ರಶ್ನಿಸಿದ್ದಾರೆ. ಅನುಶ್ರೀಗೆ ಕೋಟ್ಯಾಂತರ ರೂಪಾಯಿ ಆಸ್ತಿ ಎಲ್ಲಿಂದ ಬಂತು. ಮಂಗಳೂರಿನ 14 ಕೋಟಿ ಮನೆ ಬೆಂಗಳೂರಿನ 4 ಕೋಟಿ ಮನೆ ಟಿವಿ ಶೋದಿಂದ ಬಂತು ಅಂದ್ರೆ ನಾನು ಮೆಚ್ಚುತ್ತೇನೆಂದು ವ್ಯಂಗ್ಯವಾಡಿದ್ದಾರೆ.