ಬೀದರ್ : ಮೊನ್ನೆಯಷ್ಟೇ ಬೀದರ್ ನಲ್ಲಿ ಹಾಡ ಹಗಲೇ ದೊಡ್ಎ ಮಟ್ಟದ ದರೋಡೆಯಾಗಿದೆ. ಈ ಬೆನ್ನಲ್ಲೇ ಇದೀಗ ಕನ್ನಡದಲ್ಲಿ ಬರೆದ ಪತ್ರವೊತ್ತು, ದೊಡ್ಡಗಾತ್ರದ ಮಷಿನ್ ಒಂದು ಕೆಳಗೆ ಬಿದ್ದಿದೆ. ಇದನ್ನ ನೋಡಿದ ಬೀದರ್ ಜನತೆ ಗಾಬರಿಯಾಗಿದ್ದಾರೆ. ಈ ಘಟನೆ ನಡೆದಿರುವುದು ಬೀದರ್ ಜಿಲ್ಲೆಯ ಹಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ.
![](https://suddione.com/content/uploads/2024/10/gifmaker_me-5-1.gif)
ಆಕಾಶದಿಂದ ಬಲೂನ್ ರೀತಿ ಬಂದು ನೇರವಾಗಿ ಮನೆಯೊಂದರ ಮೇಲೆ ಬಿದ್ದಿದೆ. ಇದನ್ನು ಕಂಡು ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅದರ ಜೊತೆಗೆ ಬಲೂನ್ ಒಳಗಿರುವ ಮಷಿನ್ ನಲ್ಲಿ ರೆಡ್ ಲೈಟ್ ಬೇರೆ ಶಬ್ಧ ಮಾಡ್ತಾ ಇದೆ. ಈ ಸಂಬಂಧ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಬಲೂನ್ ನಲ್ಲಿ ಪತ್ರವೊಂದು ಸಿಕ್ಕಿದೆ. ಅದು ಕನ್ನಡದಲ್ಲಿಯೇ ಬರೆಯಲಾಗಿದೆ. ಅದರಲ್ಲಿ ಮಷಿನ್ ಬಗ್ಗೆ ಒಂದಷ್ಟು ಮಾಹಿತಿಯನ್ನು ನೀಡಲಾಗಿದೆ.
ಇದರಲ್ಲಿ ವೈಜ್ಞಾನಿಕ ಉಪಕರಣಗಳಿವೆ. ಟೈಎಫ್ಆರ್ ಬಲೂನ್ ಸೌಲಭ್ಯ ಇದಾಗಿದೆ. ದಯವಿಟ್ಟು ಗಮನಿಸಿ ಕೆಳಗಿನ ಸೂಚನೆ ಪಾಲಿಸಿದವರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ. ಆ ಸೂಚನೆಗಳು ಈ ರೀತಿ ಇವೆ.
* ಮಷಿನ್ ನಲ್ಲಿ ಏನಿದೆ ಎಂಬುದನ್ನು ತೆರೆದು ನೋಡಬಾರದು.
* ಇದರಲ್ಲಿರುವ ಎಲ್ಲಾ ವಸ್ತುಗಳನ್ನು ಕಾಪಾಡಬೇಕು.
* ಈ ಉಪಕರಣಗಳನ್ನು ಬಿದ್ದ ಸ್ಥಾನದಿಂದ ಕದಲಿಸಬಾರದು. ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕು.
* ಕೆಳಗೆ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ.
* ಈ ಉಪಕರಣ ಕೆಡಿಸಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಪೊಲೀಸ್ ಕೇಸ್ ಹಾಕಲಾಗುತ್ತದೆ ಎಂದೆಲ್ಲಾ ಬರೆಯಲಾಗಿದೆ.
![](https://suddione.com/content/uploads/2025/01/studio-11.webp)