ಸುದ್ದಿಒನ್, ಚಿತ್ರದುರ್ಗ, ಜನವರಿ. 12 : ನಗರದ ಆದರ್ಶ ಸೌಹಾರ್ದ ಪತ್ತಿನ ಸಹಕಾರಿ ನಿ. ಇಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಹಕಾರಿಯ ಅಧ್ಯಕ್ಷರಾದ ಡಿ.ಆರ್. ತಿಪ್ಪೇಸ್ವಾಮಿ ಮಾತನಾಡಿ, ಮನುಷ್ಯ, ಮನುಷ್ಯನನ್ನು ಪ್ರೀತಿಸುವುದೇ ನಿಜ ಧರ್ಮ. ಧರ್ಮದ ಸತ್ವ ಅಡಗಿರುವುದೇ ಪ್ರೀತಿಯಲ್ಲಿ ಎಂದು ಹೇಳಿದ್ದ ವಿವೇಕಾನಂದರು, ಸರ್ವಧರ್ಮ ಸಮನ್ವಯವನ್ನು ಬಯಸಿದ್ದರು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ರಘುರಾಮ್ ರೆಡ್ಡಿಯವರು ಮಾತನಾಡಿ, ವಿವೇಕಾನಂದರು ಸ್ಫೂರ್ತಿಯ ಚಿಲುಮೆಯಾಗಿದ್ದರು. ಭಾರತದ ಯುವ ಸಮುದಾಯಕ್ಕೆ ಚೈತನ್ಯ ನೀಡಿದ ಮಹಾಚೇತನ. ತನ್ನ ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಶ್ರೇಷ್ಠ ವ್ಯಕ್ತಿತ್ವ ಅವರದ್ದು.
ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಂಘದ ನಿರ್ದೇಶಕರಾದ ಟಿ ವಿ ಸುರೇಶ್ ಗುಪ್ತಾರವರು, ವೀರಶೈವ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಎಸ್ ಪರಮೇಶ್ವರ್, ಚಿತ್ರದುರ್ಗ ತಾಲ್ಲೂಕು ಸಹಕಾರ ಭಾರತೀಯ ಅಧ್ಯಕ್ಷರಾದ ಕೆ ಎಸ್ ಚಂದ್ರಮೋಹನ್, ಆರ್ಯವೈಶ್ಯ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಪಿಎನ್ ಮೋಹನ್ ಕುಮಾರ್ ಗುಪ್ತ, ಸಹಕಾರಿಯ ಉಪಾಧ್ಯಕ್ಷರಾದ ಎಸ್ ವೇದಮೂರ್ತಿ, ನಿರ್ದೇಶಕರಾದ ಎಮ್ ಕೆ ಮಲ್ಲಿಕಾರ್ಜುನ್, ವಿ. ಎಸ್. ಮಲ್ಲಿಕಾರ್ಜುನ್, ಜೆ. ಮಧುಸೂಧನ್, ಎಂ ವೆಂಕಟೇಶ್, ಎಸ್. ಮೂರ್ಕಣಪ್ಪ ಹಾಗು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.