ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕಿಂಗ್ ಕೊಹ್ಲಿ ಬಗ್ಗೆ ಈ ಮೊದಲಿದ್ದ ಕ್ರೇಜ್ ಉಳಿದಿಲ್ಲ. ಇತ್ತೀಚೆಗಂತು ಸಾಲು ಸಾಲು ಸೋಲುಗಳು ಬೆಂಬಿಡದೆ ಕಾಡುತ್ತಿವೆ. ಟೀಕೆಗಳು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ ಪರಿಹಾರಕ್ಕಾಗಿ ತಮ್ಮ ಗುರುಗಳ ಮೊರೆ ಹೋಗಿದ್ದಾರೆ. ಕಳಪೆ ಫಾರ್ಮಾನಿಂದ ನೊಂದು ಬೆಂದಿರುವ ಕೊಹ್ಲಿ ಇದೀಗ ತಮ್ಮ ಗುರುವಿಗೆ ಶರಣಾಗಿದ್ದಾರೆ.
ವೈಕುಂಠ ಏಕಾದಶಿ ಪ್ರಯುಕ್ತ ಪತ್ನಿ ಅನುಷ್ಕಾ ಶರ್ಮಾ ಹಾಗೂ ವಮಿಕಾ, ಅಕಾಯ್ ಜೊತೆಗೆ ಉತ್ತರ ಪ್ರದೇಶದ ವೃಂದಾವನಕ್ಕೆ ಭೇಟಿ ನೀಡಿದ್ದಾರೆ. ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜ ಗುರುಗಳಿಗೆ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡಿದ್ದಾರೆ. ಆದರೆ ಈ ಬಾರಿ ಕೊಹ್ಲಿಯನ್ನು ಕಂಡು ಗುರಿಗಳೇ ಭಾವುಕರಾಗಿದ್ದು ಆಶ್ಚರ್ಯವಾಗಿತ್ತು.
ಗುರುಗಳ ಭೇಟಿ ಬಳಿಕ ಮಾತನಾಡಿದ ಅನುಷ್ಕಾ ಶರ್ಮಾ, ಗುರುಗಳು ನಡೆಸಿಕೊಡುವ ಸತ್ಸಂಗ ಕಾರ್ಯಕ್ರಮ ಪವಾಡದ ರೀತಿ ತಮ್ಮ ಸಮಸ್ಯೆ ಪರಿಹಾರದ ಕಥೆ ಹೇಳಿದ್ರು. ಈ ಹಿಂದೆ ನಾವೂ ಬಂದಿದ್ದಾಗ ಮನಸ್ಸಿನಲ್ಲಿ ಹಲವು ಪ್ರಶ್ನೆಗಳಿದ್ದವು. ನಿಮ್ಮ ಬಳಿ ಆ ಪ್ರಶ್ನೆಗಳನ್ನ ಕೇಳಬೇಕು ಎಂದುಕೊಂಡಿದ್ದೆವು. ಆದರೆ ಅಲ್ಲಿ ಕೂತಿದ್ದವರು ಕೂಡ ನಾನು ಕೇಳಬೇಕು ಎಂದುಕೊಂಡಿದ್ದ ಪ್ರಶ್ನೆಯನ್ನೇ ಕೇಳಿದ್ದರು. ಈಗ ಮತ್ತೆ ಭೇಟಿ ನೀಡಬೇಕು ಎಂದು ನಾನಯ ಅಂದುಕೊಂಡಾಗ ಮನಸ್ಸಿನಲ್ಲಿಯೇ ಮಾತನಾಡಿಕೊಳ್ಳುತ್ತಿದ್ದೆ ಎಂದರು. ಆದರೆ ಇದೇ ವೇಳೆ ಗುರುಗಳು ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದರು.
ನಾವೂ ಸಾಧನೆಯನ್ನು ಮಾಡು ಜನರಿಗೆ ಸಂತೋಷ ನೀಡುತ್ತಿದ್ದೇವೆ. ಆದರೆ ಈಗ ಕ್ರಿಕೆಟ್ ಆಟದ ಮೂಲಕ ಇಡೀ ದೇಶಕ್ಕೆ ಸಂತೋಷವನ್ನು ನೀಡುತ್ತಿದ್ದಾನೆ. ಈತ ಗೆದ್ದರೆ ಇಡೀ ಭಾರತದಲ್ಲಿ ಪಟಾಕಿ ಸಿಡಿಸಿ, ಸಂಭ್ರಮಿಸುತ್ತಾರೆ. ಇಡೀ ಭಾರತದಲ್ಲು ಆನಂದ ನೆಲೆಸುತ್ತದೆ. ದೇವರು ಆಶೀರ್ವದಿಸಿದರೆ ಈತನೊಂದಿಗೆ ಇಡೀ ಭಾರತ ಸಂಭ್ರಮಿಸುತ್ತದೆ ಎಂದಿದ್ದಾರೆ.