ಸುದ್ದಿಒನ್, ಚಿತ್ರದುರ್ಗ, ಜನವರಿ. 11 : ತ್ಯಾಗರಾಜ ಬೀದಿಯಲ್ಲಿರುವ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ನಾಳೆ ( ಜ.12 ) ಬೆಳಿಗ್ಗೆ 11 ಗಂಟೆಗೆ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್‍ನಿಂದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ರಂಗೋಲಿ ಬಿಡಿಸಲು ಒಂದು ಗಂಟೆಯ ಕಾಲಾವಶವಿದ್ದು, ಹದಿನೆಂಟು ವರ್ಷ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧಾಳುಗಳು ತಾವೆ ರಂಗೋಲಿ ಬಣ್ಣ ಹಾಗೂ ಹೂವುಗಳನ್ನು ತಂದು ಬಳಸಬೇಕು. ಯಾರ ಸಹಕಾರವನ್ನು ಪಡೆಯುವಂತಿಲ್ಲ. ಸ್ವತಹ ಒಬ್ಬರೆ ರಂಗೋಲಿ ಬಿಡಿಸಬೇಕು. ಮೊದಲು ಬರುವ 30 ಮಂದಿಗೆ ಮಾತ್ರ ಸ್ಪರ್ಧೆಯಲ್ಲಿ ಅವಕಾಶವಿರುತ್ತದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಲ್ಪನಾ ಪಾಲ-ಮೊ : 7975725897, ವೀಣಾ ವೇಣುಗೋಪಾಲ್ ಮೊ : 7019416262 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.