ಸುದ್ದಿಒನ್, ಚಿತ್ರದುರ್ಗ, ಜನವರಿ. 11 : ಕೆಂಧೂಳಿ ವಾರ ಪತ್ರಿಕೆ ಬಗಳದಿಂದ ಪತ್ರಿಕೆಯ 200 ನೇ ಸಂಚಿಕೆ ಬಿಡುಗಡೆ ಹಾಗೂ ಕೆಂಧೂಳಿ ಡಿಜಿಟಲ್ ಮೀಡಿಯಾ ಉದ್ಗಾಟನೆ ಸಮಾರಂಭ ನಾಳೆ (ಜ.12) ಬೆಳಿಗ್ಗೆ 10-30 ಕ್ಕೆ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಡಾ.ಬಿ.ಎಲ್.ವೇಣು ಸಂಚಿಕೆ ಬಿಡುಗಡೆಗೊಳಿಸುವರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಕೆಂಧೂಳಿ ಡಿಜಿಟಲ್ ಮೀಡಿಯಾ ಉದ್ಘಾಟಿಸಲಿದ್ದಾರೆ.
ಸಾಹಿತಿ ಹಾಗೂ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಮದ್ರಣ ಮಾಧ್ಯಮ ಕುರಿತು ಸಂವಾದ ನಡೆಸುವರು. ಹಿರಿಯ ಪತ್ರಕರ್ತ ಸುಭಾಷ್ ಹೂಗಾರ್, ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಹನುಮೇಶ್ ಕೆ.ಯಾವಗಲ್, ಕೆಂಧೂಳಿ ವಾರ ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ್, ಪತ್ರಕರ್ತ ಹೆಚ್.ಲಕ್ಷ್ಮಣ್ ಇವರುಗಳು ಉಪಸ್ಥಿತರಿರುವರು.